ನವದೆಹಲಿ: ನ್ಯಾಯಲಯದ ಆವರಣದೊಳಗಿರುವ ವಕೀಲರ ಕಚೇರಿಗಳಿಗೂ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ದೆಹಲಿಯ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಮನೀಶ್ ಸಿಸೋಡಿಯ ಘೋಷಿಸಿದ್ದಾರೆ.
Advertisement
ಬಜೆಟ್ ಮಂಡನೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ 200 ಯೂನಿಟ್ ಉಚಿತ ವಿದ್ಯುತ್ ಮತ್ತು 400 ಯೂನಿಟ್ ಬಳಕೆದಾರರಿಗೆ ನೀಡುವ ಸಬ್ಸಿಡಿ ಯೋಜನೆಯನ್ನು ನಗರದ ಎಲ್ಲ ನ್ಯಾಯಾಲಯಗಳಲ್ಲಿರುವ ವಕೀಲರ ಕಚೇರಿಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ರೈತ ನಾಯಕ ರಾಕೇಶ್ ಟಿಕಾಯತ್‍ಗೆ ಕೊಲೆ ಬೆದರಿಕೆ
Advertisement
Advertisement
ವಿದ್ಯುತ್ ಸಬ್ಸಿಡಿಗಾಗಿ 2022-23ರ ಬಜೆಟ್‍ನಲ್ಲಿ 3250 ಕೋಟಿ ರೂ.ಹಣವನ್ನು ಇದಕ್ಕಾಗಿ ಆಪ್ ಖರ್ಚು ಮಾಡುತ್ತಿದೆ. 2015ರ ಚುನಾವಣೆ ಸಂದರ್ಭದಲ್ಲಿ ಆಪ್ ಉಚಿತ ವಿದ್ಯುತ್ ಈ ಭರವಸೆಯನ್ನು ನೀಡಿತ್ತು. ಅದರಂತೆ ಈಗ ಉಚಿತ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿ ವಿಸ್ತರಿಸುತ್ತಿದೆ.