ಪವರ್ ಸ್ಟಾರ್ ಪ್ರೇರಣೆ – 150ಕ್ಕೂ ಹೆಚ್ಚು ಜನರಿಂದ ಅಂಗಾಂಗ ದಾನಕ್ಕೆ ಪ್ರತಿಜ್ಞೆ

Public TV
2 Min Read
07 PUNEETH PKG

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮನ್ನೆಲ್ಲಾ ಅಗಲಿ ವರ್ಷವೇ ಉರುಳಿದೆ. ಆದರೂ ಅವರ ಕಾರ್ಯಗಳು ಮಾತ್ರ ಜನರನ್ನು ಪದೇ ಪದೇ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಉತ್ತೇಜಿಸುತ್ತಲೇ ಇದೆ. ಅದರಂತೆ ಬೆಂಗಳೂರಿನಲ್ಲೊಂದು (Bengaluru) ವಿಶೇಷ ಕಾರ್ಯಕ್ರಮ ಪುನೀತ್ ಜೀವನದ ಸಾರ್ಥಕತೆಗೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಕರ್ನಾಟಕ ಅಂಗಾಂಗ ದಾನದಲ್ಲಿ (Organ Donation) ದೇಶದಲ್ಲೇ ಅತಿ ಹೆಚ್ಚು ಅಂಗಾಂಗ ದಾನ ಮಾಡುತ್ತಿರುವ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲ್ಲ. ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ತಮ್ಮ ಅಂಗಾಂಗ ದಾನಗಳ ಮೂಲಕ ಇಡೀ ಪ್ರಪಂಚಕ್ಕೆ ಸ್ಪೂರ್ತಿಯಾದರು. ಅವರನ್ನೇ ಅನುಸರಿಸಿದ ಅನೇಕರು ಇಂದಿಗೂ ಪ್ರತಿನಿತ್ಯ ಅಂಗಾಂಗ ದಾನಗಳ ಫಾರಂ ಸಹಿ ಹಾಕುತ್ತಿದ್ದಾರೆ.

Puneeth Rajkumar Organ Donation

ಬೆಂಗಳೂರಿನಲ್ಲಿ ಬೃಹತ್ ಅಂಗಾಂಗ ದಾನ ಶಿಬಿರ ನಡೆದಿದ್ದು ಬರೊಬ್ಬರಿ 150 ಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ನಗರದ ಪದ್ಮನಾಭನಗರ ಎನ್‌ಯು ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 150 ಕ್ಕೂ ಹೆಚ್ಚು ಜನರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಅಂಗಾಂಗ ದಾನಕ್ಕೆ ಪಾಲಿಸಬೇಕಾದ ನಿಯಮಗಳ ಫಾರಂ ಸಹಿ ಹಾಕುವ ಮೂಲಕ ಅಪ್ಪು ಹಾದಿಯಲ್ಲೇ ಸಮಾಜಕ್ಕೆ ಒಳ್ಳೆಯದಾಗುವಂತೆ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

PUNEETH 7

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಗಾಂಗ ದಾನಕ್ಕೆ ಸಹಿ ಮಾಡಿದ ಮಹಿಳೆಯೊಬ್ಬರು ಮಾತಾನಾಡಿ, ನಮಗೆಲ್ಲ ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಅವರೇ ಸ್ಪೂರ್ತಿ. ನಾವು ಪುನರ್ಜನ್ಮದ ಮೇಲೆ ನಂಬಿಕೆ ಇಡುವುದಕ್ಕಿಂತ ಈ ರೀತಿ ಅಂಗಾಂಗಗಳ ದಾನ ಮಾಡುವ ಮೂಲಕ ಮತ್ತಷ್ಟು ಜನರ ಜೀವನಕ್ಕೆ ಅವಕಾಶ ಮಾಡಿಕೊಡಬಹುದು. ನಾನು ಕೂಡ ಇದರ ಅರಿವನ್ನು ಜನರಿಗೆ ಮೂಡಿಸುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

puneeth 3

ಈ ಹಿಂದೆ ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಯುವಜನರು ಕೃಷಿಯತ್ತ ಮುಖಮಾಡಿದ್ದರು. ಅದೇ ರೀತಿ ಅಪ್ಪುವಿನ ಒಳ್ಳೆಯ ಕೆಲಸ ಕೂಡಾ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತಿರುವುದು ಒಂದು ಒಳ್ಳೆಯ ಬದಲಾವಣೆಯಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article