ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ಭಜನಾ ಕಮ್ಮಟದ ಸಮಾರೋಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದಾರೆ.
ಏಳು ದಿನಗಳ ಕಾರ್ಯಕ್ರಮದಲ್ಲಿ 300 ಭಜನಾ ತಂಡಗಳು ಭಾಗವಹಿಸಿದ್ದವು. ಸಮಾರೋಪದ ಅಂಗವಾಗಿ ಭಜನಾ ತಂಡಗಳ 3 ಸಾವಿರಕ್ಕೂ ಹೆಚ್ಚು ಭಜನಾ ಪಟುಗಳಿಂದ ಭಜನೆಯೊಂದಿಗೆ ನಡೆದ ಶೋಭಾಯಾತ್ರೆ ಅಮೋಘವಾಗಿತ್ತು.
Advertisement
Advertisement
ಈ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಆಕರ್ಷಣೆಯಾಗಿದ್ದರು. ಭಜನಾ ತಂಡಗಳ ಜೊತೆ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ಸ್ವಾಮಿಗಳ ಕೀರ್ತನೆಯನ್ನು ಹಾಡಿದರು. ಅಲ್ಲದೇ ಪುನೀತ್ ತಮ್ಮ ತಂದೆ ರಾಜಕುಮಾರ್ ಜೊತೆ ಧರ್ಮಸ್ಥಳಕ್ಕೆ ಬಂದ ನೆನಪುಗಳನ್ನು ಹಂಚಿಕೊಂಡರು.
Advertisement
Advertisement
ಧರ್ಮಸ್ಥಳದ ನನ್ನ ಹಾಗೂ ನನ್ನ ತಂದೆಯ ನಂಟು, ನೆನೆಪು ಸಾಕಷ್ಟು ಇದೆ. ಇಲ್ಲಿ ಚಿತ್ರೀಕರಣ ಮಾಡುವಾಗ ನನ್ನ ತಂದೆ ಜೊತೆ ಬಂದ ನೆನೆಪಿದೆ ಹಾಗೂ ಮಂಜುನಾಥನ ಆಶೀರ್ವಾದ ಪಡೆಯೋಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಬರುತ್ತೇನೆ. ಆದರೆ ಸಾಂಸ್ಕೃತಿಕ, ಭಜನಾ ಕಾರ್ಯಕ್ರಮಕ್ಕೆ ಬಂದಿದ್ದು ಇದೇ ಮೊದಲ ಬಾರಿ ಬಂದಿದ್ದು ಎಂದು ಹೇಳಿದರು.
ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ಧರ್ಮಸ್ಥಳ ಹಾಗೂ ಧರ್ಮಧಿಕಾರಿ ವೀರೇಂದ್ರ ಹೆಗ್ಡೆ ಬಗ್ಗೆ ಮಾತನಾಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ತಮ್ಮ ತಂದೆ ಅವರ ಚಿತ್ರದ ‘ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ..’ ಹಾಡನ್ನು ಕಾರ್ಯಕ್ರಮದಲ್ಲಿ ಹಾಡಿದರು. ಪುನೀತ್ ಹಾಡಿಗೆ ನೆರೆದಿದ್ದರವರು ಕೂಡ ದನಿಗೂಡಿಸಿರುವುದು ವಿಶೇಷವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv