ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಡಿಯೋ ಮೂಲಕ ಧಾರವಾಡ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
‘ಯುವರತ್ನ’ ಚಿತ್ರದ ಶೂಟಿಂಗ್‍ಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಧಾರವಾಡಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ್‍ನಲ್ಲಿ ಯುವರತ್ನ ಚಿತ್ರದ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣ ನಡೆದ ಸ್ಥಳಗಳ ದೃಶ್ಯಗಳ ಜೊತೆಗೆ ಹಿನ್ನೆಲೆ ಧ್ವನಿ ಮೂಲಕ ಅಪ್ಪು ಅಭಿನಂದನೆ ಸಲ್ಲಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಎಲ್ಲ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ನಾನು ಯುವರತ್ನ ಸಿನಿಮಾವನ್ನು ಧಾರವಾಡದಲ್ಲಿ ಶೂಟ್ ಮಾಡಿದ್ದೇವೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಶೂಟಿಂಗ್ ಮಾಡಿದ್ದೀವಿ. ಅಲ್ಲಿಗೆ ಬಂದಾಗ ಅಲ್ಲಿ ನೋಡಿದ ಕಟ್ಟಡ, ವಿದ್ಯಾರ್ಥಿಗಳು, ಉಪಾನ್ಯಾಸಕರು ಹಾಗೂ ಡಿಸಿ ಹಾಗೂ ಶೂಟಿಂಗ್‍ಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಎಲ್ಲರೂ ತುಂಬಾ ಅವಕಾಶ ಕೊಟ್ಟರು. ಧಾರವಾಡದಲ್ಲಿ ಇದ್ದಾಗ ಉತ್ತರ ಕರ್ನಾಟಕ ಜನರ ಪ್ರೀತಿ ನನಗೆ ತುಂಬಾ ಸಂತೋಷ ಕೊಟ್ಟಿತು. ಕೆಲವರಿಗೆ ಫೋಟೋ ತೆಗೆಸಿಕೊಳ್ಳಲು ಸಿಗಲು ಆಗಿರಕ್ಕಿಲ್ಲ ಅದಕ್ಕೆ ಕ್ಷಮಿಸಿ. ಧಾರವಾಡಿಗರು ಶೂಟಿಂಗ್ ಸಮಯದಲ್ಲಿ ತೋರಿದ ಪ್ರೀತಿ ನನ್ನ ಜೀವಮಾನದಲ್ಲಿ ಮರೆಯೋದಿಲ್ಲ ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.
ಈ ವಿಡಿಯೋ 1 ನಿಮಿಷ 24 ಸೆಕೆಂಡ್‍ನ ವಿಡಿಯೋ ಮೂಲಕ ಅಪ್ಪು ಅಭಿನಂದನೆ ಸಲ್ಲಿಸಿದ ಬಳಿಕ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv