ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ, ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು, ಇದೀಗ ದಾಳಿಗೆ ಒಳಗಾಗಿದ್ದ ಒಬ್ಬೊಬ್ಬರನ್ನೇ ಐಟಿ ಕಚೇರಿಗೆ ಕರೆಸಿ ಡ್ರಿಲ್ ಮಾಡುತ್ತಿದ್ದಾರೆ. ಬುಧವಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಬುಧವಾರ ಹಾಜರಾಗಿದ್ದರು.
ಸ್ಯಾಂಡಲ್ವುಡ್ ಸ್ಟಾರ್ ನಟ, ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು, ಈಗ ಒಬ್ಬೊಬ್ಬರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೂ ಕೂಡ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಬುಧವಾರ ಪುನೀತ್ ರಾಜ್ಕುಮಾರ್ ತಮ್ಮ ಆಡಿಟರ್ ಜೊತೆ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸಂಜೆ ಮೂರು ಮುಕ್ಕಾಲು ಗಂಟೆಗೆ ಬಂದಿದ್ದ ಪುನೀತ್ ಅವರಿಗೆ ಐಟಿ ಅಧಿಕಾರಿಗಳು ಸತತ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
Advertisement
Advertisement
ಐಟಿ ಅಧಿಕಾರಿಗಳ ದಾಳಿ ವೇಳೆ ಪುನೀತ್ ರಾಜ್ಕುಮಾರ್ ಗೆ ಪಿಆರ್ ಕೆ ಪ್ರೊಡಕ್ಷನ್ ಹೌಸ್, ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್, ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಸೇರಿದಂತೆ ಜಾಹಿರಾತಿನಿಂದ ಬಂದ ಆದಾಯದ ಮೂಲಗಳ ಕುರಿತಾಗಿ ಕೆಲ ಪ್ರಶ್ನೆಗಳನ್ನು ಪುನೀತ್ ಅವರಿಗೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧಿತ ಪ್ರಶ್ನೆಗಳಿಗೆ ತಮ್ಮ ಆಡಿಟರ್ ಮೂಲಕ ಅಗತ್ಯ ದಾಖಲೆ ಪೂರೈಸಿರುವ ಮಾಹಿತಿ ಸಹ ಲಭ್ಯವಾಗಿದ್ದು, ಈಗಾಗಲೇ ಪುನೀತ್ ರಾಜ್ಕುಮಾರ್ ನೀಡಿರುವ ದಾಖಲೆಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅಗತ್ಯ ಬಿದ್ದರೆ, ಮತ್ತೆ ತಿಳಿಸಲಾಗುವುದು ಅಂತಾ ಹೇಳಿ ಕಳುಹಿಸಿದ್ದಾರೆ. ನಮ್ಮ ಮನೆಯಲ್ಲಿ ಯಾವುದೇ ಅಕ್ರಮ ಆಸ್ತಿ ಪತ್ತೆಯಾಗಿಲ್ಲ, ಐಟಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ದಾಖಲೆ ನೀಡಿದ್ದೇನೆ ಎಂದು ಪುನೀತ್ ತಿಳಿಸಿದ್ದಾರೆ.
Advertisement
Advertisement
ಸದ್ಯದ ಮಟ್ಟಿಗೆ ಪುನೀತ್ ಅವರ ವಿಚಾರಣೆ ಮುಗಿದಿದ್ದು, ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಗೂ ಕೂಡ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv