ಹುಟ್ಟುಹಬ್ಬದ ಸಂಭ್ರಮದಲ್ಲಿ ಪುನೀತ್, ಜಗ್ಗೇಶ್

Public TV
1 Min Read
Jaggesh Puneeth

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಪುನೀತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

ಹುಟ್ಟುಹಬ್ಬದ ಪ್ರಯುಕ್ತ ಪುನೀತ್ ನಟನೆಯ ‘ಯುವರತ್ನ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಯೂಟ್ಯೂಬ್‍ನಲ್ಲಿ ನಂ. 1 ಟ್ರೆಂಡಿಂಗ್‍ನಲ್ಲಿದ್ದು, ಇದುವರೆಗೂ 8 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಬಂದಿದೆ. ಈ ಟೀಸರ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಎರಡು ದಿನಗಳ ಹಿಂದೆ ಪುನೀತ್ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ ಅದರಲ್ಲಿ, “ಎಲ್ಲಾ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರ. ಈ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರೂ 17ರಂದು ತಮ್ಮ ತಮ್ಮ ಊರುಗಳಿಂದ ಮನೆಯ ಹತ್ತಿರ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ. ಏಕೆಂದರೆ ಇಡೀ ದೇಶದಲ್ಲಿ ಕೊರೊನಾ ಸಮಸ್ಯೆ ಇದೆ. ಇದಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲರೂ ಸೇರಿ ಕೈ ಜೋಡಿಸಬೇಕು. ಹಾಗಾಗಿ ಬೇರೆ ಬೇರೆ ಊರುಗಳಿಂದ ಬಂದು ನಿಮ್ಮ ಪ್ರೀತಿ, ವಿಶ್ವಾಸ ತೋರಿಸುತ್ತಿದ್ರಿ. ಖಂಡಿತವಾಗಿ ನಿಮ್ಮ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲೆ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ, ಹುಷಾರಾಗಿರಿ” ಎಂದು ತಿಳಿದರು.

ಇತ್ತ ನವರಸ ನಾಯಕ ಜಗ್ಗೇಶ್ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆದಿನ ನೆನೆದು ಕೂತಕ್ಷಣ ರೋಮಾಂಚನ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಪುನೀತ್ ಅವರ ಫೋಟೋ ಹಾಕಿ, “ನಲ್ಮೆಯ ಸಹೋದರ ಪುನೀತ್ ರಾಜ್‍ಕುಮಾರ್‍ಗೆ ಹುಟ್ಟುಹಬ್ಬದ ಶುಭಾಷಯಗಳು. ಆಯು, ಆರೋಗ್ಯ, ಯಶ ಪ್ರಾಪ್ತಿರಸ್ತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ” ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *