ಬೆಂಗಳೂರು: ಪವರ್ ಶೇರಿಂಗ್ (Power Sharing) ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಏನು ಹೇಳಿದ್ದಾರೆ ಅಷ್ಟೇ. ಯಾರೂ ಕೂಡ ಅದರ ಬಗ್ಗೆ ಮಾತನಾಡಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಹೈಕಮಾಂಡ್ ಅಂತಿಮ ಅಂತ ಅಷ್ಟೇ. ಅವರ ಪರವಾಗಿ ಮಾತನಾಡಿದರೂ ಡ್ಯಾಮೇಜ್, ನನ್ನ ಪರವಾಗಿ ಮಾತನಾಡಿದರೂ ಡ್ಯಾಮೇಜ್ ಆಗುತ್ತೆ. ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡಲು ಹಕ್ಕಿಲ್ಲ. ರಂಗನಾಥ್ ಸೇರಿದಂತೆ ಯಾರೂ ಸಹ ಮಾತನಾಡಬಾರದು ಎಂದರು. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು
ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ. ಮಾಧ್ಯಮದವರು ಬೇರೆ ರೀತಿಯಲ್ಲಿ ಬರೆಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಯಾರೂ ಚರ್ಚೆ ಮಾಡಬಾರದು. ಇದರ ಬಗ್ಗೆ ಮತಾಡೋರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ. ಕುಣಿಗಲ್ ಶಾಸಕ ರಂಗನಾಥ್, ಮಾಜಿ ಸಂಸದ ಶಿವರಾಮೇಗೌಡರಿಗೂ ನೋಟಿಸ್ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು ದಸರಾ | ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ