ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ಮಗ್ಗ (Power Loom) ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ (Electricity Subsidy) ಮಿತಿ ರದ್ದುಪಡಿಸಿದೆ. ಇದರಿಂದ ಪ್ರತಿ ನೇಕಾರರಿಗೆ ವಾರ್ಷಿಕ ಕನಿಷ್ಟ 40,000 ರೂ. ಉಳಿತಾಯವಾಗಲಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ (Shivanand Patil) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10.1 HPಯಿಂದ 20 HPವರೆಗಿನ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳು ಬಳಕೆ ಮಾಡುವ ಪೂರ್ಣ ವಿದ್ಯುತ್‌ಗೆ ಸಬ್ಸಿಡಿ ನೀಡಲಿದ್ದು, ನೇಕಾರರು ಪ್ರತಿ ಯೂನಿಟ್‌ಗೆ 1.25 ರೂ. ಮಾತ್ರ ಪಾವತಿ ಮಾಡಬೇಕು. ಸರ್ಕಾರದ ಈ ಕ್ರಮದಿಂದ 4000 ಘಟಕಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ – ಶಿವಾನಂದ ಪಾಟೀಲ
Advertisement
Advertisement
ಇದುವರೆಗೆ ಮಾಸಿಕ 500 ಯೂನಿಟ್ ಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿತ್ತು. ಹೆಚ್ಚುವರಿ ಬಳಕೆಯ ವಿದ್ಯುತ್ ನೇಕಾರರು ವಿದ್ಯುತ್ ಕಂಪನಿಗಳು ನಿಗದಿಪಡಿಸಿರುವ ದರದಲ್ಲಿ ವಿದ್ಯುತ್ ಶುಲ್ಕ ಪಾವತಿಸಬೇಕಿತ್ತು. ಸರ್ಕಾರ ಸಬ್ಸಿಡಿ ಮಿತಿ ರದ್ದುಪಡಿಸಿರುವುದರಿಂದ ಮಾಸಿಕ ಎಷ್ಟೇ ಯೂನಿಟ್ ವಿದ್ಯುತ್ ಬಳಕೆ ಮಾಡಿದರೂ ರೂ 1.25 ದರ ವಿಧಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಭಾರತೀಯ ರೈಲ್ವೆಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ ವಿನೇಶ್ ಫೋಗಟ್
Advertisement
ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ 10 HPವರೆಗಿನ ಎಲ್ಲಾ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಶೂನ್ಯದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
Advertisement
10.1 ರಿಂದ 20 HPವರೆಗೆ ಸಬ್ಸಿಡಿ ದರದಲ್ಲಿ 500 ಯೂನಿಟ್ ಪೂರೈಕೆ ಮಾಡಲಾಗುತ್ತಿತ್ತು. ನೇಕಾರರು 500 ಯೂನಿಟ್ ಮಿತಿ ರದ್ದುಪಡಿಸಿ ಪೂರ್ಣ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಸರ್ಕಾರ ನೇಕಾರರ ಬೇಡಿಕೆಗೆ ಸ್ಪಂದಿಸಿ 500 ಯೂನಿಟ್ ಮಿತಿ ರದ್ದುಪಡಿಸಿದೆ. ಈ ಕ್ರಮದಿಂದ ಸರ್ಕಾರಕ್ಕೆ ವಾರ್ಷಿಕ 17 ಕೋಟಿ ರೂ. ಹೊರೆಯಾಗಲಿದೆ ಎಂದು ತಿಳಿಸಿದರು.