– ತೋಟಕ್ಕೆ ಕಾಲಿಡಲು ರೈತರಿಗೆ ಭಯ
– ದ್ರಾಕ್ಷಿ ತೋಟದ ಕಂಬಿಗಳಿಂದ ಉರಿಯುತ್ತಿದೆ ವಿದ್ಯುತ್ ಬಲ್ಬ್
ಚಿಕ್ಕಬಳ್ಳಾಪುರ: ರೈತರ ಜಮೀನುಗಳಲ್ಲಿ ಎಲ್ಲೆಂದರಲ್ಲಿ ಕರೆಂಟ್ ಶಾಕ್ ಹೊಡೆಯುತ್ತಿದೆ. ಹೀಗಾಗಿ ರೈತರು ತಮ್ಮ ತೋಟಗಳಿಗೂ ಹೆಜ್ಜೆ ಇಡಲು ಭಯ ಪಡುವಂತಹ ಪರಿಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕುರವಿಗೆರೆ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ರೈತ ಮುನೇಗೌಡ ಎಂಬವರ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಟವರ್ ಅಳವಡಿಸಲಾಗಿದೆ. ಹೀಗಾಗಿ ಈ ಹೈಟೆನ್ಷನ್ ವಿದ್ಯುತ್ ಟವರ್ ನಿಂದ ವಿದ್ಯುತ್ ಭೂಮಿಗೆ ಹರಿಯುತ್ತಿದ್ದು, ಟವರ್ ಸುತ್ತ ಮುತ್ತಲಿನ 300 ಮೀಟರ್ ವರೆಗೂ ವಿದ್ಯುತ್ ಪ್ರವಹಿಸುತ್ತಿದೆ. ರೈತ ಹನುಮಂತರಾಜು ದ್ರಾಕ್ಷಿ ತೋಟದಲ್ಲೂ ವಿದ್ಯುತ್ ಪ್ರವಹಿಸುತ್ತಿದೆ.
Advertisement
Advertisement
ದ್ರಾಕ್ಷಿ ತೋಟಕ್ಕೆ ಹಾಕಲಾಗಿರುವ ಕಂಬಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಭೂಮಿಯ ಒಳಗೆ ಒಂದು ಅರ್ಥೀಂಗ್ ವೈರ್ ಕನೆಕ್ಟ್ ಮಾಡಿ ಮತ್ತೊಂದು ವೈರ್ ದ್ರಾಕ್ಷಿ ತೋಟದ ಕಂಬಿಗೆ ಅಟ್ಯಾಚ್ ಮಾಡಿ ಬಲ್ಬ್ ಗೆ ಕನೆಕ್ಷನ್ ಕೊಟ್ರೆ ಬಲ್ಬ್ ಹೊತ್ತಿಕೊಳ್ಳುತ್ತಿದೆ. ಮೊದಮೊದಲು ತೋಟದಲ್ಲಿ ಕೆಲಸ ಮಾಡುವ ಕೂಲಿಯಾಳುಗಳಿಗೆ ಪವರ್ ಶಾಕ್ ಅನುಭವವಾಗಿದೆ. ತದನಂತರ ರೈತರು ಪರಿಶೀಲನೆ ನಡೆಸಿದಾಗ ವಿದ್ಯುತ್ ಪ್ರವಹಿಸುತ್ತಿರುವುದು ದೃಢವಾಗಿದೆ.
Advertisement
ಹೀಗಾಗಿ ತೋಟದಲ್ಲಿ ಕೆಲಸ ಮಾಡೋಕೆ ಕೂಲಿಯಾಳುಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ರೈತರು ಸಹ ಜಮೀನಿನೊಳಗೆ ಹೆಜ್ಜೆ ಇಡೋಕೂ ಭಯ ಬೀಳುವಂತಾಗಿದೆ. ಇನ್ನೂ ಈ ಬಗ್ಗೆ ಸ್ಥಳೀಯ ಕೆಪಿಟಿಸಿಎಲ್ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಪ್ರಯೋಜನವಾಗಿಲ್ಲ. ಇದು ಕೇಂದ್ರ ಸರ್ಕಾರಿ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೋರೇಶನ್ ಸಂಸ್ಥೆ ಅಳವಡಿಸಿರುವ ಟವರ್ ಆಗಿದ್ದು ಅವರಿಗೆ ತಿಳಿಸಿ ಅಂತ ಕೆಪಿಟಿಸಿಎಲ್ ನವರು ಹೇಳುತ್ತಿದ್ದಾರೆ ಅಂತ ರೈತರು ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews