ಕಮಲ್ ಹಾಸನ್‌ಗೆ ನಾಯಕಿಯಾದ ಕನ್ನಡದ ನಟಿ ತ್ರಿಶಾ

Public TV
1 Min Read
trisha krishnan

‘ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರದ ಸಕ್ಸಸ್ ನಂತರ ತ್ರಿಶಾ ಕೃಷ್ಣನ್‌ಗೆ (Thrisha Krishnan) ಬೇಡಿಕೆ ಜಾಸ್ತಿ ಆಗಿದೆ. ಸ್ಟಾರ್ ಹೀರೋಗಳ ಬಿಗ್ ಬಜೆಟ್ ಸಿನಿಮಾಗಳಿಗೆ ನಾಯಕಿಯಾಗಿ ಕನ್ನಡದ ಪವರ್ (Power) ಚಿತ್ರದ ನಟಿ ತ್ರಿಶಾ ಕೃಷ್ಣನ್ ಬುಕ್ ಆಗಿದ್ದಾರೆ. ಹೀಗಿರುವಾಗ ಅವರ ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.

thrishaವಿಜಯ್ ದಳಪತಿ (Vijay Thalapathy) ನಟನೆಯ ಲಿಯೋ (Leo Film) ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಶ್ಮೀರ ಸೇರಿದಂತೆ ಹಲವೆಡೆ ಸಿನಿಮಾದ ಚಿತ್ರೀಕರಣ ನಡೆದಿದೆ. ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಅಜಿತ್ (Ajith) ನಟನೆಯ ‘ವಿದಮುಯರ್ಚಿ’ ಸಿನಿಮಾದಲ್ಲಿ ತ್ರಿಶಾ ಹೀರೋಯಿನ್ ಆಗಿದ್ದು, ದುಬೈನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಬೆನ್ನಲ್ಲೇ ಕಮಲ್ ಹಾಸನ್‌ಗೆ ನಾಯಕಿಯಾಗಿ ನಟಿ ಸೆಲೆಕ್ಟ್ ಆಗಿದ್ದಾರೆ. ಇದನ್ನೂ ಓದಿ:ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ ‘ಬನ್ ಟೀ’ಯಲ್ಲಿದೆ ಪರಿಹಾರ

thrisha

ಮಣಿರತ್ನಂ (Maniratnam) ನಿರ್ದೇಶನದ ಸಿನಿಮಾದಲ್ಲಿ ಕಮಲ್ ಹಾಸನ್ (Kamal Haasan) ಹೀರೋ ಆಗಿದ್ದು, ಇದು ಕಮಲ್ 234ನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಕಮಲ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

40ರ ಹರೆಯದಲ್ಲೂ ಫಿಟ್ ಆಗಿರೋ ತ್ರಿಶಾಗೆ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಫಿಕ್ಸ್ ಆಗ್ತಿದ್ದಾರೆ. 2014ರಲ್ಲಿ ಕನ್ನಡದ ‘ಪವರ್’ ಸಿನಿಮಾದಲ್ಲಿ ಪುನೀತ್‌ಗೆ(Puneeth Rajkumar) ನಾಯಕಿಯಾಗಿ ನಟಿಸಿದ್ದರು.

Share This Article