ಹೈದರಾಬಾದ್: ಗರ್ಭಿಣಿಯೊಬ್ಬರಿಗೆ ವೈದ್ಯರು ಮೊಬೈಲ್ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ನರಸೀಪಟ್ಟಣಂನಲ್ಲಿರುವ ಎಸ್‍ಟಿಆರ್ ಆಸ್ಪತ್ರೆಯಲ್ಲಿ ನಡೆದಿದೆ.
ನಡೆದಿದ್ದೇನು?: ಗರ್ಭಿಣಿಗೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಕರೆಂಟ್ ಇರಲಿಲ್ಲ. ಇದರಿಂದ ಗರ್ಭಿಣಿ ಕಡೆಯವರಿಗೆ ಆತಂಕ ಎದುರಾಗಿತ್ತು. ಆದರೆ ಆಸ್ಪತ್ರೆಯ ನರ್ಸ್‍ಗಳು ಗರ್ಭಿಣಿಯ ಪತಿಗೆ ಎಷ್ಟು ಸಾಧ್ಯವೋ ಅಷ್ಟು ಮೊಬೈಲ್, ಕ್ಯಾಂಡಲ್ ಟಾರ್ಚ್‍ಲೈಟ್‍ಗಳನ್ನು ಅರೇಂಜ್ ಮಾಡಲು ಹೇಳಿದರು.
Advertisement
ಕ್ಯಾಂಡಲ್ ಹಾಗೂ ಸಂಬಂಧಿಕರ ಮೊಬೈಲ್‍ಗಳನ್ನು ತಂದು ನರ್ಸ್‍ಗಳು ಕೈಗೆ ಕೊಟ್ಟರು. ಆ ಸೆಲ್‍ಫೋನ್‍ಗಳು, ಕ್ಯಾಂಡಲ್ ಬೆಳಕಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದೇವೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.
Advertisement
Baby born using cell phone light, candles & torch (attendants were asked to arrange) as there was no power supply for several hours & generator was not working at NTR govt Hosp #Anakapalle #Narsipatnam #AndhraPradesh; ‘hell inside for pregnant women, baby n moms’ @ndtv @ndtvindia pic.twitter.com/9nr1EGMtbr
— Uma Sudhir (@umasudhir) April 8, 2022
ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ರಾತ್ರಿಯಲ್ಲಿ ನಾನು ಟಾರ್ಚ್, ಮೊಬೈಲ್‍ಗಳ ವ್ಯವಸ್ಥೆ ಮಾಡಲು ಬಹಳ ಪರದಾಡಬೇಕಾಯಿತು. ಆಸ್ಪತ್ರೆಯಲ್ಲಿ ಇಷ್ಟು ರಾತ್ರಿ ವೇಳೆ ಆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಬೇಕಾ? ಅಥವಾ ಆಸ್ಪತ್ರೆಯವರು ಅದಕ್ಕೆ ಮುಂಚಿತವಾಗಿ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕಾ? ಆ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮಾತ್ರವಲ್ಲ. ಇತರ ಮಹಿಳೆಯರೂ ಇದ್ದರು. ಎಲ್ಲರೂ ನರಳುತ್ತಿದ್ದರು. ಅದನ್ನು ಕಂಡು ನನಗೆ ಹೆದರಿಕೆಯಾಗಿತ್ತು. ನನ್ನ ಹೆಂಡತಿ ಮತ್ತು ಮಗುವಿನ ಪ್ರಾಣದ ಬಗ್ಗೆ ನನಗೆ ಬಹಳ ಭಯವಾಗಿತ್ತು ಎಂದು ಆ ಗರ್ಭಿಣಿಯ ಪತಿ ಖಾಸಗಿ ವಾಹಿನಿ ಜೊತೆಗೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ?
Advertisement
ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಆಂಧ್ರಪ್ರದೇಶದ ವಿದ್ಯುತ್ ಇಲಾಖೆಯು ಶೇ. 50ರಷ್ಟು ವಿದ್ಯುತ್ ಕಡಿತವನ್ನು ಘೋಷಿಸಿದೆ. ಆಂಧ್ರಪ್ರದೇಶವು ದಿನಕ್ಕೆ ಸುಮಾರು 5 ಲಕ್ಷ ಯೂನಿಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಸುದೀರ್ಘ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್‍ಲೆಸ್ ಸುಂದರಿ
Advertisement
ಆಸ್ಪತ್ರೆಗೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.