ಬೆಂಗಳೂರು: ಸಂಸದ ಸಾಗರ್ ಖಂಡ್ರೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಶ್ರೀ ಕೃಷ್ಣ ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶ್ರೀ ಕೃಷ್ಣ ಅಪಾರ್ಟ್‌ಮೆಂಟ್‌ನ ಮ್ಯಾನೇಜರ್ ಚಂದ್ರ ಕುಮಾರ್ ಹಾಗೂ ಸೆಕ್ರೆಟರಿ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಚಿವ ಈಶ್ವರ್ ಖಂಡ್ರೆ ಅಪ್ತ ಸಹಾಯಕ ದೂರು ದಾಖಲಿಸಿದ್ದು, ವಿನಾಕಾರಣ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಏ.2 ರಂದು ಅಲಿ ಅಸ್ಕರ್ ರಸ್ತೆಯಲ್ಲಿರುವ ಶ್ರೀ ಕೃಷ್ಣ ಅಪಾರ್ಟ್ಮೆಂಟ್ ಸೊಸೈಟಿಯಿಂದ ಪೂರ್ವಾನುಮತಿ ಪಡೆದು ನವೀಕರಣ ಮಾಡಲಾಗುತ್ತಿತ್ತು. ಮೆಟ್ಟಿಲುಗಳ ಮೇಲೆ ಬೆಳಕಿನ ವ್ಯವಸ್ಥೆ ಮಾಡಲು ವೈರ್ ಎಳೆಯಲಾಗಿತ್ತು. ಇದನ್ನು ನೆಪಮಾಡಿಕೊಂಡು ಮ್ಯಾನೇಜರ್ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿದ್ದಾರೆ ಎಂದು ಆರೋಪಿಸಲಾಗಿದೆ.
ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.