ಕಿನ್ಶಾಸ: ತರಕಾರಿ ಖರೀದಿಗೆ ಬಂದವರ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು, 30 ಮಂದಿ ಸುಟ್ಟು ಕರಕಲಾದ ಘಟನೆ ಕಾಂಗೋದ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ನಡೆದಿದೆ.
ಮಾರುಕಟ್ಟೆ ಗಲೀಜಿನಿಂದ ಕೂಡಿದ್ದು, ರಸ್ತೆ ತುಂಬೆಲ್ಲ ಕೆಸರು ತುಂಬಿತ್ತು. ಇದರ ಪರಿಣಾಮವಾಗಿ ವಿದ್ಯುತ್ ಕಂಬಗಳು ಕೂಡಾ ಸಡಿಲಗೊಂಡಿದ್ದವು. ಹೀಗಾಗಿ ವಿದ್ಯುತ್ ಕಂಬ ಮಾರುಕಟ್ಟೆಯ ಮಧ್ಯ ಭಾಗದಲ್ಲಿ ಬಿದ್ದಿದೆ. ಈ ಪರಿಣಾಮ ತರಕಾರಿ ಖರೀದಿಗೆ ಬಂದವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
Advertisement
#RDC: Un extrait de la situation au quartier Matadi Kibala . Il s’agit d’une pillonne haute tension tombée sur le marché matadi kibala ce matin. Des témoins évoquent plus de 30 morts. pic.twitter.com/4DoQvpNXQT
— Rachel Kitsita Ndongo (@rkitsita) February 2, 2022
Advertisement
ವಿದ್ಯತ್ ಕಂಬ ಕೆಸರಿನಿಂದ ಕೂಡಿದ ನೀರಿಗೆ ಬಿದ್ದಿದೆ. ತಕ್ಷಣವೇ ಅಲ್ಲಿದ್ದವರಿಗೆ ಶಾಕ್ ತಗುಲಿದೆ. ಸರಿಸುಮಾರಾಗಿ 30 ಮಂದಿ ಸಾವನ್ನಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ
Advertisement
ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿರುವುದನ್ನು ಕಾಣಬಹುದಾಗಿದೆ. ಕೆಲವು ಮೃತದೇಹಗಳು ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಿವೆ.