ಗ್ಯಾಂಗ್ ರೇಪ್‍ಗೈದು ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನಕ್ಕೆ ಯತ್ನ

Public TV
1 Min Read

ಕೋಲ್ಕತ್ತಾ: 40 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆರೋಪಿಗಳು ಮಹಿಳೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದ ನಮ್ಖಾನಾ ಗ್ರಾಮದಲ್ಲಿ ನಡೆದಿದೆ.

ದೂರಿನ ಪ್ರಕಾರ, ಮಹಿಳೆಯು ಬೆಳಗ್ಗೆ 4 ಗಂಟೆ ಸುಮಾರಿಗೆ ವಾಶ್‍ರೂಮ್ ಬಳಸಲು ಹೊರಗೆ ಹೋದಾಗ ಅಪಹರಿಸಿದ್ದಾರೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ ಎರಡನೇ ಮಹಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಆರೋಪಿಗಳು ಆಕೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಲು ಯತ್ನಿಸಿದ್ದಾರೆ. ಇದನ್ನೂ ಓದಿ: ನಿನ್ನ ಪತ್ನಿಯನ್ನು ರಾತ್ರಿ ಕಳುಹಿಸು ಎಂದ ಬಾಸ್ – ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

arrested new

ಸಂತ್ರಸ್ತೆಯ ಕಿರುಚಾಟವು ಆಕೆಯ ಅಕ್ಕ ಪಕ್ಕದ ಮನೆಗೆ ಕೇಳಿಸಿದೆ. ಕೂಡಲೇ ಅವರು ಅವಳ ಸಹಾಯಕ್ಕೆ ಬಂದಿದ್ದಾರೆ. ನೆರೆಹೊರೆಯವರು ಬರುತ್ತಿರುವುದನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಭಯಭೀತಳಾಗಿದ್ದ ಮಹಿಳೆ ತಕ್ಷಣ ಪೊಲೀಸರಿಗೆ ದೂರು ನೀಡಲಿಲ್ಲ. ಆದರೆ, ಶನಿವಾರದಿಂದ ಆಕೆಯ ಆರೋಗ್ಯ ಹದಗೆಡಲಾರಂಭಿಸಿತು. ಹೀಗಾಗಿ ಆರಂಭದಲ್ಲಿ ಆಕೆಯನ್ನು ನಮ್ಖಾನಾ ಬ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಭಾನುವಾರ ಆಕೆಯನ್ನು ಕಾಕದ್ವೀಪ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಕೇಂದ್ರೀಯ ವಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ – ಮೂವರ ವಿರುದ್ಧ FIR

Police Jeep

ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಖಾನಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸಂತ್ರಸ್ತೆಯ ಪತಿಯ ಹಿರಿಯ ಸಹೋದರ ಮತ್ತು ಸಂಬಂಧಿ ಎಂದು ಗುರುತಿಸಲಾಗಿದೆ. ಈಗಾಗಲೇ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಂದರಬನ್ ಭಾಸ್ಕರ್ ಮುಖರ್ಜಿ ತಿಳಿಸಿದ್ದಾರೆ.

ದಕ್ಷಿಣ 24 ಪರಗಣದ ನಮ್ಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ.

Share This Article