ಧಾರವಾಡ: 18,000 ರೂ. ಬದಲಿಗೆ 8,000 ರೂ. ವೇತನ ನೀಡುತ್ತಿದ್ದುದ್ದಕ್ಕೆ ಮನನೊಂದ ಪೌರಕಾರ್ಮಿಕರೊಬ್ಬರು (Pourakarmika) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ವಗ್ಗೆಣ್ಣವರ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ
ಇವರಿಗೆ ಸರ್ಕಾರ ತಿಂಗಳಿಗೆ 18,000 ರೂ. ವೇತನ ನೀಡುತ್ತದೆ. ಆದರೆ ಮಹಾನಗರ ಪಾಲಿಕೆಗೆ ಬರುವ ಈ ವೇತನವನ್ನು ಗುತ್ತಿಗೆದಾರ ಕಡಿತ ಮಾಡಿ, ಕೇವಲ 8,000 ರೂ. ಹಣವನ್ನು ಮಾತ್ರ ನೀಡುತ್ತಿದ್ದ. ರಜೆ ಮಾಡಿದರೆ ಆ ಸಂಬಳದಲ್ಲೂ ಕಡಿತಗೊಳಿಸಿ ಹಣ ನೀಡುತ್ತಿದ್ದ.
ಇದರಿಂದ ಮನನೊಂದು ಪೌರಕಾರ್ಮಿಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪಾಲಿಕೆ ನಾಮ ನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ ಆರೋಪಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಪೌರ ಕಾರ್ಮಿಕನಿಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ 15 ವರ್ಷಗಳಿಂದ ಧಾರವಾಡದ 17ನೇ ವಾರ್ಡ್ನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರಿಗೆ ಗುತ್ತಿಗೆದಾರ ಕೆಲ ತಿಂಗಳಿನಿಂದ ವೇತನವನ್ನೇ ನೀಡಿರಲಿಲ್ಲ. ಜೊತೆಗೆ ಕಿರುಕುಳ ಸಹ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.
ಈ ಬಗ್ಗೆ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಿಗೆ 18,000 ಸಾವಿರ ವೇತನವನ್ನ ನೇರವಾಗಿ ಅವರ ಅಕೌಂಟ್‌ಗೆ ಜಮೆ ಮಾಡುತ್ತದೆ. ಆದರೆ ಗುತ್ತಿಗೆದಾರ ಸಾಕಷ್ಟು ಪೌರ ಕಾರ್ಮಿಕರಿಗೆ ಇದೇ ರೀತಿಯಾಗಿ ಪ್ರತಿ ತಿಂಗಳು ವೇತನ ಕಡಿಮೆ ಕೊಟ್ಟು ತೊಂದರೆ ಕೊಡುತ್ತಿದ್ದಾನೆ. ಸಂಬAಧಪಟ್ಟ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.