ಗದಗ: ಲಾಕ್‍ಡೌನ್ ನಡುವೆ ನಿಸ್ವಾರ್ಥದಿಂದ ಕರ್ತವ್ಯ ನಿರ್ವಹಿಸುತ್ತಿರುವ ಗದಗ ನಗರದ ಪೌರಕಾರ್ಮಿಕರಿಗೆ ಮುತ್ತಿನ ಹಾರ ಹಾಕಿ ಸನ್ಮಾನಿಸಲಾಗಿದೆ.
ನಗರದ ಸರ್ವೋದಯ ಕಾಲೋನಿಯ ನಿವಾಸಿಗಳು ಇಂದು ತಮ್ಮ ಏರಿಯಾಗೆ ಬಂದ ಕಾರ್ಮಿಕರಿಗೆ ಮುತ್ತಿನ ಹಾರ ಹಾಕಿ ಸನ್ಮಾನಿಸಿದ್ದಾರೆ. ಕೊರೊನಾ ಭೀತಿಯಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಪೌರ ಕಾರ್ಮಿಕರು ಕೊರೊನಾಗೆ ಹೆದರಿಕೊಳ್ಳದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೌರ ಕಾರ್ಮಿಕರ ಕೆಲಸ ಮೆಚ್ಚಿದ ಸ್ಥಳೀಯರು ಹಾರ ಸನ್ಮಾನಿಸಿ ಗೌರವ ಸಲ್ಲಿಸಿದ್ದಾರೆ.
Advertisement
Advertisement
ದೇಶದೆಲ್ಲಡೆ ಪೌರಕಾರ್ಮಿಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಪಂಜಾಬ್ ರಾಜ್ಯದ ಪಟಿಯಾಲದಲ್ಲಿ ತಮ್ಮ ಬಡವಾಣೆ ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರಿಬ್ಬರಿಗೆ ಸ್ಥಳೀಯರು ಅವರ ಮೇಲೆ ಹೂಮಳೆಗೈದು, ನೋಟುಗಳ ಹಾರ ಹಾಕಿ ಗೌರವ ಸಲ್ಲಿಸಿದ್ದರು.
Advertisement