ಕೋಳಿ ತೂಕದಲ್ಲಿ ಮೋಸ: ವಂಚನೆಗೈದವರನ್ನು ಮರಕ್ಕೆ ಕಟ್ಟಿ ಹಾಕಿದ ರೈತ

Public TV
1 Min Read
Poultry Chiken weight fraud cheated were tied to a tree pandavapura Mandya 1

ಮಂಡ್ಯ: ಮಾಂಸದ ಕೋಳಿ (Chicken) ತುಂಬುವಾಗ ತೂಕದಲ್ಲಿ ವಂಚನೆಗೈದವರನ್ನು ರೈತರೊಬ್ಬರು (Farmer) ಮರಕ್ಕೆ ಕಟ್ಟಿ ಹಾಕಿದ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ಜರುಗಿದೆ.

ಚಿಕ್ಕಬ್ಯಾಡರಹಳ್ಳಿ ಗ್ರಾಮದ ರೈತ ಹನುಮಂತೇಗೌಡ ಅವರು ಕೋಳಿಫಾರಂ ನಡೆಸುತ್ತಿದ್ದು, ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು. ಕೋಳಿ ಖರೀದಿಸಲು ಬರುತ್ತಿದ್ದ ಮೈಸೂರು ಮೂಲದ ಎನ್‌ಆರ್ ಚಿಕನ್ ಕಂಪನಿಯ ಸಿಬ್ಬಂದಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ರೈತನಿಗೆ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡುತ್ತಿದ್ದರು.

 

ಅನುಮಾನಗೊಂಡ ರೈತ ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ ಬೆಳಕಿಗೆ ಬಂದಿದೆ. ಈ ವೇಳೆ ಒಂದು ತೂಕದಲ್ಲಿ ರೈತನಿಗೆ ಸುಮಾರು 30 ಕೆಜಿ ವ್ಯತ್ಯಾಸ ಬಂದಿದೆ.

ಇದರಿಂದ ರೊಚ್ಚಿಗೆದ್ದ ರೈತ ಹನುಮಂತೇಗೌಡ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ತೂಕದಲ್ಲಿ ಮೋಸ ಮಾಡಿ ಇದುವರೆಗೂ ವಂಚಿಸಿದ ಇವರ ವಿರುದ್ದ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.  ಇದನ್ನೂ ಓದಿ: ಬೆಂಗಳೂರಲ್ಲಿ ಕೆಳಗೆ ಬಿದ್ದ ಮೊಬೈಲ್‌ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಹಿಳೆ

 

Share This Article