ಬೆಂಗಳೂರು: ಬೆಂಗಳೂರಲ್ಲಿ (Bengaluru) ರಸ್ತೆ (Road) ಗುಂಡಿ ಅವಾಂತರಗಳು ಕಡಿಮೆಯಾಗ್ತಿಲ್ಲ. ಈ ಯಮಸ್ವರೂಪಿ ಗುಂಡಿಗಳ ಸಂಖ್ಯೆಯನ್ನು ಪತ್ತೆ ಹಚ್ಚೋಕೆ ಬಿಬಿಎಂಪಿ (BBMP) ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೊರೆಹೋಗಿತ್ತು. ಇದೀಗ ಈ ಆ್ಯಪ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.
ಬೆಂಗಳೂರಿನಲ್ಲಿ ಗುಂಡಿ ಗಂಡಾಂತರವನ್ನು ತಪ್ಪಿಸಲು, ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಅನ್ನು ಚಾಲ್ತಿಗೆ ತಂದಿತ್ತು. ಈ ಆ್ಯಪ್‍ಗೆ ಈಗ ಸಾವಿರಾರು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ನಲ್ಲಿ ನಿತ್ಯ ಸರಾಸರಿ 200-300 ಕೇಸ್‍ಗಳು ದಾಖಲಾಗುತ್ತಿದೆ. ಈ ಆ್ಯಪ್ ಲಾಂಚ್ ಆಗಿ 13 ದಿನಕ್ಕೆ ಅಂದರೆ ಜನವರಿ 14ಕ್ಕೆ ಬರೋಬ್ಬರಿ 40,803 ದೂರು ದಾಖಲಾಗಿತ್ತು. ಜನ ತಮ್ಮ ಮನೆ ಬೀದಿಗಳನ್ನು ಸರಿಪಡಿಸಿಕೊಳ್ಳಲು ಛಲ ಬಿಡದ ತ್ರಿವಿಕ್ರಮನಂತೆ ಸಾಲು ಸಾಲು ದೂರುಗಳನ್ನು ದಾಖಲಿಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಿದ ಖಾಕಿ
Advertisement
Advertisement
ಈ ಬಗ್ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಮಾತನಾಡಿ, ಆ್ಯಪ್‍ನಲ್ಲಿ ದೂರುಗಳು ಸ್ವೀಕರಿಸಿ, ಬಿಬಿಎಂಪಿ ಗುಂಡಿಗಳನ್ನು ಮುಚ್ಚೋಕೆ ಮೂರು ದಿನ ಟೈಮ್ ಕೊಡುತ್ತೇವೆ. ಬಿಬಿಎಂಪಿಯ 8 ಝೋನ್‍ಗಳಲ್ಲಿಯೂ ಗುಂಡಿ ಮುಚ್ಚೋ ಕೆಲಸ ಆಗುತ್ತಿದೆ. ಇನ್ನೂ ಮುಚ್ಚುವ ಪ್ರಯತ್ನದಲ್ಲಿದ್ದೇವೆ. ಈ ಆ್ಯಪ್‍ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ನಾಲ್ವರು ಕಳ್ಳರ ಕೈ ಕಟ್ ಮಾಡಿದ ತಾಲಿಬಾನ್ ಸರ್ಕಾರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k