ಕೋಲಾರ: ಹೆಸರಿಗಷ್ಟೇ ಚಿನ್ನದ ನಾಡು. ಆದರೆ ಇಲ್ಲಿಗೆ ಎಂಟ್ರಿ ಕೊಟ್ಟರೆ ಸಾಕು ಎಲ್ಲೆಲ್ಲೂ ಸಾವಿನ ರಸ್ತೆ ಗುಂಡಿಗಳು. ಚಿನ್ನದ ಮೌಲ್ಯಕ್ಕಾದರೂ ನಗರ ಸುಸ್ಥಿತಿಯಲ್ಲಿ ಇರಬೇಕು. ಆದರೆ ಇಲ್ಲಿರೋ ಸಾವಿನ ಗುಂಡಿಗಳನ್ನು ನೋಡಿದರೇ ಜನನಾಯಕರೇ ನಾಚಿಕೆ ಪಡಬೇಕು.
ಮುಖ್ಯಮಂತ್ರಿಗಳು ರಾಜ್ಯ ಪ್ರವಾಸವನ್ನು ಕೋಲಾರದಿಂದಲೇ ಆರಂಭಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದೇ ಕೋಲಾರದಲ್ಲಿ ಎಲ್ಲಿ ನೋಡಿದರೂ ಹಳ್ಳ-ಕೊಳ್ಳಗಳು ಇವೆ. ಮಳೆಯಿಂದ ಎಲ್ಲಾ ಗುಂಡಿಗಳು ತುಂಬಿಕೊಂಡಿವೆ. ಜನರು ಕಷ್ಟಪಟ್ಟು ತಮ್ಮ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇಲ್ಲಿ ರಸ್ತೆ ಕಾಮಗಾರಿ ನಡೆದು ಇನ್ನು ವರ್ಷ ಕಳೆದಿಲ್ಲ. ಆಗಲೇ ರಸ್ತೆಗಳು ಹಾಳಾಗಿವೆ. ಜನರಿಗೆ ಗುಂಡಿ ಯಾವುದು ಅನ್ನೋದು ತಿಳಿಯದೇ ತಮ್ಮ ಜೀವವನ್ನು ಹಿಡಿದು ಪ್ರಯಾಣಿಸ್ತಿದ್ದಾರೆ.
Advertisement
Advertisement
ಕೋಲಾರ ಇಷ್ಟೇ ಅಲ್ಲದೇ ಬಂಗಾರಪೇಟೆ-ಬಾಗೇಪಲ್ಲಿ ಮುಖ್ಯರಸ್ತೆ, ಬೆಂಗಳೂರು-ಮುಳಬಾಗಿಲು ಮುಖ್ಯರಸ್ತೆ, ದೇವನಹಳ್ಳಿ-ಕೋಲಾರ ಮುಖ್ಯರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಕಳಪೆ ಕಾಮಗಾರಿಯ ಪರಿಣಾಮ ರಸ್ತೆಗಳೆಲ್ಲಾ ಕೊಚ್ಚಿಹೋಗಿದೆ. ಅಂತ ಸಾರ್ವಜನಿಕರು ದೂರಿದ್ದಾರೆ. ಆದರೂ ಇದರ ವಿರುದ್ಧ ಕ್ರಮ ಕೈಗೊಳ್ಳಿಲ್ಲ ಎಂದು ಸ್ಥಳೀಯ ರಾಜೇಶ್ ಅವರು ತಿಳಿಸಿದ್ದಾರೆ.
Advertisement
ಈ ಸಂಬಂಧ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದೇವೆ. ಮಳೆ ನಿಂತ ಮೇಲೆ ಗುಂಡಿ ಮುಚ್ಚುವ ಕೆಲಸ ಮಾಡುತ್ತೀವಿ ಅಂತ ಜಿಲ್ಲಾಧಿಕಾರಿ ಡಾ.ಕೆ.ವಿ ತ್ರಿಲೋಕಚಂದ್ರ ಅವರು ತಿಳಿಸಿದರು.
Advertisement