– ಬರೇಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ; ಲಾಠಿಚಾರ್ಜ್
ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) `ಐ ಲವ್ ಮುಹಮ್ಮದ್’ (I Love Muhammad) ಅಭಿಯಾನ ಉಲ್ಬಣಗೊಂಡ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ (BJP Yuva Morcha) ಟಕ್ಕರ್ ಕೊಡಲು `ಐ ಲವ್ ಯೋಗಿ ಆದಿತ್ಯನಾಥ್’ ಅಭಿಯಾನ ಪ್ರಾರಂಭಿಸಿದೆ.
`ಐ ಲವ್ ಯೋಗಿ ಆದಿತ್ಯನಾಥ್’ (I Love Yogi Adityanath), ‘ಐ ಲವ್ ಬುಲ್ಡೋಜರ್’ (I Love Bulldozer) ಹೆಸರಿನಲ್ಲಿ ಬಿಜೆಪಿ ಯುವ ಮೋರ್ಚಾ ಅಭಿಯಾನ ಆರಂಭಿಸಿದ್ದು, ಲಕ್ನೋದ (Lucknow) ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಸಿಎಂ ಮತ್ತು ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ಯುವ ಮೋರ್ಚಾ ನಾಯಕರು ಫ್ಲೆಕ್ಸ್ ಅಳವಡಿಸಿದ್ದಾರೆ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಮಿತ್ ತ್ರಿಪಾಠಿ ನೇತೃತ್ವದಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಐ ಲವ್ ಮುಹಮ್ಮದ್’ ವಿವಾದ ಉಲ್ಬಣ – ಪ್ರತಿಭಟನೆ ವೇಳೆ ಕಲ್ಲೆಸೆತ, ಪೊಲೀಸರಿಂದ ಲಾಠಿಚಾರ್ಜ್
#WATCH | Uttar Pradesh: BJP Yuva Morcha Lucknow general secretary Amit Tripathi puts up flex boards reading ‘I love Shri Yogi Adityanath ji’ and ‘I love bulldozer’ in parts of the city. pic.twitter.com/quZR9qzUTV
— ANI (@ANI) September 27, 2025
ಬರೇಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ; ಲಾಠಿಚಾರ್ಜ್
`ಐ ಲವ್ ಮುಹಮ್ಮದ್’ ಫ್ಲೆಕ್ಸ್ ವಿಚಾರವಾಗಿ ಕಾನ್ಪುರದಲ್ಲಿ ಮೊದಲು ವಿವಾದ ಆರಂಭವಾಗಿತ್ತು. ಶುಕ್ರವಾರ ಬರೇಲಿಯಲ್ಲಿ ನಡೆದ ಪ್ರತಿಭಟನೆ ಹಿಂಸತ್ಮಾಕ ಸ್ವರೂಪ ಪಡೆದುಕೊಂಡಿತ್ತು. ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಶುರುವಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಲಾಠಿಚಾರ್ಜ್ ಮಾಡಲಾಗಿದೆ. ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಭದ್ರತೆ ಆರ್‌ಎಎಫ್ ಮತ್ತು ಪಿಎಸಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು 13 ವರ್ಷದ ಮಗಳನ್ನೇ ಕತ್ತು ಹಿಸುಕಿಕೊಂದ ಕಟುಕ ತಂದೆ
ಸೆ.4 ರಂದು ‘ಐ ಲವ್ ಮುಹಮ್ಮದ್’ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ಪೊಲೀಸರು ತೆಗೆಸಿದ್ದರು. ನಂತರ ಕಾನ್ಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಧ್ವನಿ ಎತ್ತಲು ಮತ್ತು ಜ್ಞಾಪಕ ಪತ್ರವನ್ನು ಸಲ್ಲಿಸಲು ಧರ್ಮಗುರುವೊಬ್ಬರು ಕರೆ ನೀಡಿದ್ದರು. ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಇಸ್ಲಾಮಿಯಾ ಮೈದಾನದ ಬಳಿ ಭಾರಿ ಜನಸಮೂಹ ಜಮಾಯಿಸಿತ್ತು. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ
ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿದ್ದಂತೆ ಜನಸಮೂಹ ಹೆಚ್ಚುತ್ತಲೇ ಇತ್ತು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ಬಾಂಧವ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ಕೈಲಾಶ್
ಸೆ.4 ರಂದು ಕಾನ್ಪುರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ಸಂದರ್ಭದಲ್ಲಿ, ಮಾರ್ಗದುದ್ದಕ್ಕೂ ಟೆಂಟ್‌ನಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಹಾಕಲಾಗಿತ್ತು. ಇದು ಗಲಾಟೆಗೆ ಕಾರಣವಾಗಿದೆ.

