ನವದೆಹಲಿ: ಆಪ್ (AAP) ಮತ್ತು ಬಿಜೆಪಿ (BJP) ನಡುವೆ ನಡೆಯುತ್ತಿರುವ ಪೋಸ್ಟರ್ ವಾರ್ (Poster War) ತಾರಕಕ್ಕೇರಿದೆ. ದೆಹಲಿಯಲ್ಲಿ (Delhi) ‘ಮೋದಿ ಹಟಾವೋ, ದೇಶ್ ಬಚಾವೋ’ ಪೊಸ್ಟರ್ ಅಂಟಿಸಿದ ಆಪ್ ಕಾರ್ಯಕರ್ತರ ಬಂಧನದ ಬಳಿಕ ಪೋಸ್ಟರ್ ಅಭಿಯಾನವನ್ನು ತೀವ್ರಗೊಳಿಸಿರುವ ಆಮ್ ಅದ್ಮಿ ಪಕ್ಷ 11 ಭಾಷೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪೋಸ್ಟರ್ ಅಂಟಿಸಲು ಆರಂಭಿಸಿದೆ.
ಈ ಹಿಂದೆ ‘ಮೋದಿ ಹಟಾವೋ, ದೇಶ್ ಬಚಾವೋ’ಗೆ ಸೀಮಿತವಾಗಿದ್ದ ಪೋಸ್ಟರ್ ವಾರ್‌ನಲ್ಲಿ ಈಗ ಪ್ರಧಾನಿಗಳ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ. ‘ಕ್ಯಾ ಭಾರತ್ ಕೆ ಪಿಎಂ ಕೋ ಪಢೆ ಲಿಖೆ ಹೋನಾ ಚಾಹಿಯೇ?’ (ಭಾರತದ ಪ್ರಧಾನಿ ಶಿಕ್ಷಿತರಾಗಿರಬೇಕು ಅಲ್ಲವೇ) ಎಂಬ ಪೋಸ್ಟರ್‌ಗಳನ್ನು ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂಟಿಸಲಾಗಿದೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಎಎಪಿ ಮುಖ್ಯಸ್ಥ ಗೋಪಾಲ್ ರೈ, ಪಕ್ಷದ ಎಲ್ಲಾ ರಾಜ್ಯ ಘಟಕಗಳಿಗೆ ಆಯಾ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲು ಸೂಚಿಸಿದೆ. ಪೋಸ್ಟರ್‌ಗಳನ್ನು 11 ಭಾಷೆಗಳಲ್ಲಿ ಮುದ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
‘ಮೋದಿ ಹಟಾವೋ, ದೇಶ್ ಬಚಾವೋ’ ಪೋಸ್ಟರ್ ಅಂಟಿಸಿದ ಬಳಿಕ ಪೊಲೀಸರು 6 ಮಂದಿ ಆಮ್ ಆದ್ಮಿ ಕಾರ್ಯಕರ್ತರನ್ನು ಬಂಧಿಸಿತ್ತು. ಈ ಬೆಳವಣಿಗೆ ಬಳಿಕ ಮತ್ತಷ್ಟು ಪೋಸ್ಟರ್ ಅಂಟಿಸಿದ್ದ 100ಕ್ಕೂ ಅಧಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಂಧಿತರಲ್ಲಿ 2 ಪ್ರಿಂಟಿಂಗ್ ಪ್ರೆಸ್‌ಗಳ ಮಾಲೀಕರು ಇದ್ದು, ಒಂದು ಲಕ್ಷಕ್ಕೂ ಅಧಿಕ ಪೋಸ್ಟರ್ ಮುದ್ರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Exclusive: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ಔಟ್
ದೆಹಲಿ ಪೊಲೀಸರು ‘ಭಾರತದ ಪ್ರಧಾನಿ ಸಾಕ್ಷರರಾಗಬೇಕೇ?’ ಎಂದು ಬರೆದಿರುವ ಆಪ್‌ನ ಪೋಸ್ಟರ್‌ಗಳನ್ನು ಹರಿದು ಹಾಕುತ್ತಿದ್ದಾರೆ. ಇದರರ್ಥ ಪ್ರಧಾನಿ ಮೋದಿ, ಅವರ ಪಕ್ಷ ಮತ್ತು ಪೊಲೀಸರು ಭಾರತದ ಪ್ರಧಾನಿ ಅನಕ್ಷರಸ್ಥನಾಗಿರಬೇಕು ಎಂದು ಒಪ್ಪಿಕೊಂಡಿದ್ದಾರೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಗುರುವಾರ ಟ್ವಿಟ್ಟರ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಬಿಗ್ ರಿಲೀಫ್ – ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್