ತಿರುವನಂತಪುರಂ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡುವ ವೇಳೆ ವರನು ಬಂಡೆಯಿಂದ ಜಾರಿಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ನವ ವಧು, ವರ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಬಂಡೆ ಮೇಲೆ ನಿಂತು ಪೋಸ್ ಕೊಡುವ ವೇಳೆ ವರ ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ಕಾಲು ಜಾರಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ವಧುವನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವರ ಕೊನೆಯುಸಿರೆಳೆದ್ದಾನೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ
Advertisement
Advertisement
ಮಾರ್ಚ್ 14 ರಂದು ದಂಪತಿಗಳು ವಿವಾಹವಾಗಿದ್ದರು. ಮೃತ ವರನನ್ನು ಪೆರಂಬ್ರಾ ಸಮೀಪದ ಕಡಿಯಂಗಡ್ ನಿವಾಸಿ, ರೆಜಿಲ್ ಎಂದು ಗುರುತಿಸಲಾಗಿದೆ.
Advertisement
ಪೆರುವಣ್ಣಮುಳಿ ಪೊಲೀಸರ ಪ್ರಕಾರ, ಕುಟ್ಟಿಯಾಡಿ ನದಿ ನೀರಿನ ಅಡಿಯಲ್ಲಿ ಆಳವಾದ ಹೊಂಡವಿದೆ. ಈಜು ಬಾರದಿದ್ದ ರೆಜಿಲ್ ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.