ವಾಷಿಂಗ್ಟನ್: ಸಾಮಾನ್ಯವಾಗಿ ಶ್ವಾನಪ್ರಿಯರು ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದರ ತಿಂಡಿ, ಆರೋಗ್ಯ ಸೇರಿದಂತೆ ನಾಯಿಗಳಿಗೆ ಇರುವ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು ಬರೋಬ್ಬರಿ 5,000 ಡಾಲರ್ (3.9 ಲಕ್ಷ ರೂ) ಖರ್ಚು ಮಾಡಿದ್ದಾನೆ.
ಯುನೈಟೆಡ್ ಸ್ಟೇಟ್‌ನ ಮಧ್ಯಪಶ್ಚಿಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೆಡ್ಡಿಟ್ ಬಳಕೆದಾರನೊಬ್ಬ ತಮ್ಮ ಸಾಕು ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಾರ್ಯವಿಧಾನದ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?: 12 ವರ್ಷದ ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು ಪಶು ವೈದ್ಯರತ್ತಿರ ಕರೆದೊಯ್ಯಲಾಗಿತ್ತು. ಆಗ ಅಲ್ಲಿ ನಾಯಿಯು ಹಲ್ಲಿನ ಬಣ್ಣವನ್ನು ಕಳೆದುಕೊಂಡಿತು. ಇದರಿಂದಾಗಿ ಆ ಕಾರ್ಯವಿಧಾನವನ್ನು ನಿಲ್ಲಿಸಲಾಯಿತು. ಜೊತೆಗೆ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿಸಲಾಯಿತು. ಏಕೆಂದರೆ ಶ್ವಾನವು ಉತ್ತಮ ಆರೋಗ್ಯವನ್ನು ಹೊಂದಿದೆಯೇ ಎಂದು ಪರೀಕ್ಷಿಸಬೇಕಾಗಿತ್ತು. ಈ ಪರೀಕ್ಷೆಗಳಲ್ಲಿ ರಕ್ತ ಪರೀಕ್ಷೆಗಳು ಮತ್ತು ಹೃದಯ ತಪಾಸಣೆಗಳನ್ನು ಮಾಡಿಸಲಾಯಿತು.
ಅದಾದ ಬಳಿಕ ತಜ್ಞರನ್ನು ಸಂಪರ್ಕಿಸಿ ಬಾಯಿಯ ಎಕ್ಸ್ ರೇ ಅನ್ನು ಮಾಡಿಸಲಾಯಿತು. ಅಷ್ಟೇ ಅಲ್ಲದೇ ಶ್ವಾನದ ಕೆಲ ಹಲ್ಲುಗಳನ್ನು ಹೊರತೆಯಲು ಹೇಳಿದ್ದರು. ಏಕೆಂದರೆ ಶ್ವಾನಕ್ಕೆ ಕ್ಯಾನ್ಸರ್ ಇದೆಯಾ ಎಂದು ಖಚಿತ ಪಡಿಕೊಳ್ಳಲು ಬಯಾಪ್ಸಿ ಮಾಡಲಾಗಿತ್ತು. ಈ ಎಲ್ಲಾ ಕಾರ್ಯ ವಿಧಾನಕ್ಕೆ 5,000 ಡಾಲರ್ ವೆಚ್ಚವಾಯಿತು ಎಂದು ತಿಳಿಸಿದ್ದಾರೆ.