ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಯೂಥ್ ಕಾಂಗ್ರೆಸ್ ದೂರು ನೀಡಿದೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ಈ ಕುರಿತಂತೆ ಗೋವಿಂದ ನಾಯಕ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇದನ್ನೂ ಓದಿ: ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು
Advertisement
Advertisement
ಗೋವಿಂದ್ ನಾಯಕ ಹುಣಸೂರಿನ ಕಲ್ಕುಣಿಕೆಯ ನಿವಾಸಿಯಾಗಿದ್ದು, ಇದೀಗ ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಗೆ ಯೂಥ್ ಕಾಂಗ್ರೆಸ್ ದೂರು ನೀಡಿದೆ. ಇದನ್ನೂ ಓದಿ: ಭಿನ್ನಮತಕ್ಕೆ ಬ್ರೇಕ್ ಹಾಕಲು ಉದ್ಧವ್ ಠಾಕ್ರೆ – ಶಿಂಧೆ ಸಭೆ, ಬಿಜೆಪಿ ನಾಯಕರೇ ಮಧ್ಯಸ್ಥಿಕೆ: ದೀಪಾಲಿ ಸೈಯದ್