ನವದೆಹಲಿ: ಕೋವಿಡ್ (Covid-19) ಸಾಂಕ್ರಾಮಿಕದ ನಂತರ ಮದ್ಯಸೇವನೆ (Drinking) ಮಾಡುವುದರಲ್ಲಿ ಮಹಿಳೆಯರ (Women) ಸಂಖ್ಯೆಯೇ ಹೆಚ್ಚಾಗಿದೆ ಎಂದು ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (CADD) ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ ತೋರಿಸಿದೆ.
ಈ ವರ್ಷ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ 18 ರಿಂದ 68ನೇ ವಯಸ್ಸಿನ 5,000 ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯ ದತ್ತಾಂಶವು ಮಹಿಳೆಯರಲ್ಲಿ (Women’s) ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ. ಮನೆಯಲ್ಲಿ ಹಾಗೂ ಮನೆಯ ಪಾರ್ಟಿಗಳಲ್ಲಿ (House Parties) ಕುಡಿಯುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಪಬ್‌ಗಳಿಗೆ (Pub) ಹೋಗಿ ಕುಡಿಯಲು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ. ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ
Advertisement
Advertisement
ಈ ಕುರಿತು ಸಿಎಡಿಡಿ (ACDD) ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ಮಾತನಾಡಿದ್ದು, ಇತ್ತೀಚಿನ ಪ್ರವೃತ್ತಿಗಳು ಮಹಿಳೆಯರಲ್ಲಿ ಮದ್ಯ ಸೇವೆನೆ ಮಾಡುವುದನ್ನು ಹೆಚ್ಚಾಗಿಸಿದೆ. ಕಳೆದ 3 ವರ್ಷಗಳಲ್ಲಿ ಕುಡಿಯುವ ಮಾದರಿಗಳು ಬದಲಾಗಿದೆ. ಸಾಂಕ್ರಾಮಿಕದ ನಂತರ ಅದರ ಒತ್ತಡದಿಂದಾಗಿಯೇ ಹೆಚ್ಚು ಮದ್ಯ ಸೇವಿಸಲು ಆರಂಭಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಹಿಳೆಯರು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿದ್ದರು. ನಂತರ ಕನಿಷ್ಠ ಶೇ.30 ಮಹಿಳೆಯರು ತಮ್ಮ ಆಲ್ಕೋಹಾಲ್ (Alcohol) ಸೇವನೆಯನ್ನು ಶೇ.42.3ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
Advertisement
Advertisement
ಶೇ.45.7 ರಷ್ಟು ಮಹಿಳೆಯರು ಒತ್ತಡದಿಂದ, ಶೇ.30.1 ರಷ್ಟು ಮಹಿಳೆಯರು ಬೇಸರ ಹಾಗೂ ಒಂಟಿ ತನದಿಂದ ಹಾಗೂ ಶೇ.34.4 ರಷ್ಟು ಮಹಿಳೆಯರು ಆಲ್ಕೋಹಾಲ್ ಲಭ್ಯವಾಗುತ್ತಿರುವುದರಿಂದ ಕುಡಿತದ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಕುಟುಂಬ ನಿರ್ವಹಣೆ, ಮನೆಗೆಲಸ, ವೃತ್ತಿಪರ ಜೀವನ ನಿರ್ವಹಣೆ ನಿಭಾಯಿಸುವುದರಿಂದ ಪುರುಷರಿಗಿಂತ ಮೂರುಪಟ್ಟು ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮಹಿಳೆಯರಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿರುವುದಾಗಿ ತಿಳಿಸಿದ್ದಾರೆ.