ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

Public TV
1 Min Read
waste post

ಬೆಂಗಳೂರು: ಆಧಾರ್ ಕಾರ್ಡ್ ಎಂಬುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕು, ಇಂತಹ ಆಧಾರ್ ಕಾರ್ಡ್ ಜನರ ಕೈ ಸೇರುವ ಬದಲು ಕಸದ ತೊಟ್ಟಿ ಸೇರಿದ ಘಟನೆ ಬೆಂಗಳೂರು ಹೊರವಲಯ ಮಂಡೂರು ಗ್ರಾಮದಲ್ಲಿ ನಡೆದಿದೆ.

ಮಂಡೂರಿನ ಅಂಚೆ ಕಚೇರಿ ಸಿಬ್ಬಂದಿಯ ಒಳ ಜಗಳದಿಂದ ಆಧಾರ್ ಕಾರ್ಡ್ ಜೊತೆಗೆ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿದ್ದ ಸಾಲಮನ್ನಾ ಪತ್ರಗಳು ಕಸದ ಬುಟ್ಟಿಗೆ ಸೇರಿದೆ. ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ಪತ್ರಗಳನ್ನು ಅಂಚೆ ಮುಖಾಂತರ ಕಳುಹಿಸಿತ್ತು. ಆದ್ರೆ ಅಂಚೆ ಸಿಬ್ಬಂದಿಗಳ ಎಡವಟ್ಟು ಕೆಲಸದಿಂದ ರೈತರಿಗೆ ಅನ್ಯಾನವಾಗಿದೆ. ಜೊತೆಗೆ ಆಧಾರ್ ಗೆ ನೊಂದಣಿಯಾದವರ ಕಾರ್ಡ್ ಗಳು ಕೂಡ ಸೇರಬೇಕಾದವರಿಗೆ ತಲುಪದೇ ಕಸದ ಬುಟ್ಟಿ ಸೇರಿದೆ.

waste post 1

ಕಚೇರಿಗೆ ಬಂದ ಪೋಸ್ಟ್ ಗಳನ್ನು ಜನರಿಗೆ ತಲುಪಿಸದೇ ಕಸದ ತೊಟ್ಟಿಗೆ ಎಸೆದಿದ್ದ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಬಳಿಕ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸದಸ್ಯ ಕೆಂಪರಾಜು ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಅಂಚೆ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕಸದ ತೊಟ್ಟಿಗೆ ಎಸೆದಿರುವ ಆಧಾರ್ ಕಾರ್ಡ್ ಹಾಗೂ ಸರ್ಕಾರದಿಂದ ರೈತರಿಗೆ ನೀಡಿರುವ ಸವಲತ್ತು ಪತ್ರಗಳನ್ನು ಅವರ ಮನೆಬಾಗಲಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

waste post 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article