ಕಾರವಾರ: ಜನರ ಹಣವನ್ನು ಖಾತೆಗೆ ಜಮಾ ಮಾಡದೇ ವಂಚಿಸಿ ಅಂಚೆ ಸಿಬ್ಬಂದಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್‍ನ ಅಂಚೆ ಕಚೇರಿಯಲ್ಲಿ ನೆಡೆದಿದೆ.
ಲಕ್ಷ್ಮಣ್ ಗೋವಿಂದ ನಾಯ್ಕ ಎಂಬಾತ ವಂಚಿಸಿ ಪರಾರಿಯಾದ ಶಾಖಾ ಅಂಚೆ ಪಾಲಕನಾಗಿದ್ದಾನೆ. ಮೋಸ ಹೋದ ಖಾತೇದಾರರು ಅಂಚೆ ಕಚೇರಿಯಲ್ಲಿ ಜಮಾಯಿಸಿದ್ದರು. ಕಳೆದ ಬುಧವಾರದಂದು ಖಾತೆದಾರರೊಬ್ಬರು ತಮ್ಮ ಹಣವನ್ನು ಕೇಂದ್ರ ಅಂಚೆ ಕಚೇರಿಯಲ್ಲಿ ಡ್ರಾ ಮಾಡುವಾಗ ಖಾತೆಯಲ್ಲಿ ಹಣವಿಲ್ಲದನ್ನು ಗಮನಿಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
Advertisement
Advertisement
600 ಜನ ಎಸ್‍ಬಿ ಖಾತೆದಾರರು, 300 ಜನ ಆರ್‍ಡಿ, 300ಕ್ಕೂ ಹೆಚ್ಚು ಜನ ಟಿಡಿ ಖಾತೆದಾರರರಿಗೆ ಈತ ಹಣವನ್ನು ಜಮಾ ಮಾಡದೇ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ವಂಚಿಸಿದ್ದಾನೆಂದು ಅಂದಾಜಿಸಲಾಗಿದೆ. ಅಂಚೆ ಕಚೇರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನೆಡೆಸುತ್ತಿದ್ದಾರೆ.
Advertisement
ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಅಂಚೆ ನೌಕರನಿಗಾಗಿ ಪೊಲೀಸರು ಹುಡುಕಾಟ ನೆಡೆಸುತ್ತಿದ್ದಾರೆ.