ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ (Guruprasad) ಅವರು ಆತ್ಮಹತ್ಯೆಯಿಂದ (Suicide) ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ (Post Mortem Exam) ದೃಢಪಟ್ಟಿದೆ.
ನ್ಯೂ ಹೆವನ್ ಅಪಾರ್ಟ್‌ಮೆಂಟ್‌ನಲ್ಲಿದ್ದ ಮೃತದೇಹವನ್ನು ಇಳಿಸಿದ ಬಳಿಕ ಸಂಜೆ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಮರಣೋತ್ತರ ಪರೀಕ್ಷೆಗೆ ತರಲಾಯಿತು. ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್ ಪತ್ನಿ ನೀಡಿದ ದೂರಿನಲ್ಲಿ ಏನಿದೆ?
ಸಾವನ್ನಪ್ಪಿ 78 ಗಂಟೆಗಳು ಆಗಿದ್ದು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ದೇಹ ಉಸಿರುಗಟ್ಟಿ ಪ್ರಾಣ ಹೋಗಿದೆ. ದೇಹ ಕೊಳೆತು ಹೋಗಿದ್ದರಿಂದ ರಕ್ತ ಹೊರಬಂದಿದೆ. ಇದನ್ನೂ ಓದಿ: ನಾಲ್ಕು ಅನುಮಾನಗಳಿಗೆ ಕಾರಣವಾದ ಗುರುಪ್ರಸಾದ್ ಸಾವು!
ಹೊಟ್ಟೆಯಲ್ಲಿದ್ದ ದ್ರವ ರೂಪ ಮತ್ತು ಆಹಾರ ಪದಾರ್ಥವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಮಾತ್ರೆ ಸೇವನೆ ಮಾಡಿದ್ದಾರಾ ಎನ್ನುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಬಯದಲಾಗಬೇಕಿದೆ.