Bollywood

ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

Published

on

Share this

ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.

ಕರಣ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನ್ನನ್ನು ಬಿಟ್ಟು ಹೋಗಿ ತುಂಬಾ ವರ್ಷಗಳಾಗಿದೆ. ಆದರೂ ಸಹ ಅಪ್ಪ ನೀವು ನಿನ್ನೆ ನನ್ನ ಜೊತೆಯಲ್ಲಿ ಇದ್ದ ರೀತಿ ಇದೆ. ನಾನು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಅವರು ಮಾರ್ಗದರ್ಶನ ನೀಡುತ್ತಿದ್ದರು. ಯಶ್ ಜೋಹರ್ ಫೌಂಡೇಶನ್ ಈಗ ಸ್ಥಾಪನೆಯಾಗಿದೆ. ಅದರಿಂದ ನಮ್ಮ ಸುತ್ತಮುತ್ತ ಒಳ್ಳೆಯ ರೀತಿ ಬದಲಾಗುತ್ತೆ ಎಂದು ನಾನು ನಂಬಿದ್ದೇನೆ. ಅದು ಅಲ್ಲದೇ ನನ್ನ ಅಪ್ಪ ಎಲ್ಲಿಯೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ. ನನ್ನನ್ನು ಬೆಂಬಲಿಸುವ ಹಲವು ರೂಪದಲ್ಲಿ ಇದ್ದಾರೆ. ಅವರ ಸ್ವಭಾವ ನಡತೆ ಮತ್ತು ದಯಾ ಗುಣ ಹಲವರಿಗೆ ಸ್ಫೂರ್ತಿ ನೀಡಿದೆ ಅದರಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

 

View this post on Instagram

 

A post shared by Karan Johar (@karanjohar)

ಈ ಮೌಲ್ಯಗಳನ್ನು ನಮ್ಮ ಪರಂಪರೆಯಾಗಿ ಮುಂದುವರಿಸಲು ಮತ್ತು ಅದನ್ನು ನನ್ನ ಮಕ್ಕಳಿಗೂ ಕಲಿಸಲು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನಿಮ್ಮ ಶಕ್ತಿ, ನಿಮ್ಮ ಪ್ರೀತಿ ಮತ್ತು ನಿಮ್ಮ ವಾತ್ಸಲ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

ಯಶ್ ಜೋಹರ್ ಕೂಡ ದೂಡ್ಡ ನಿರ್ಮಾಪಕರಾಗಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ 2004 ಯಶ್ ಜೋಹರ್ ಸಾವನ್ನಪ್ಪಿದರು. ನಂತರ ಕರಣ್ ಅವರ ತಂದೆಯ ಧರ್ಮ  ಪ್ರೋಡಕ್ಷನ್ಸ್ ಅನ್ನು ವಹಿಸಿಕೊಂಡರು. ಪ್ರಸ್ತುತ ಬಾಲಿವುಡ್ ನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಹಲವು ಸ್ಟಾರ್‍ಗಳಿಗೆ ಗಾಡ್ ಫಾದರ್ ಸಹ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications