ಕೋಲಾರ: ಪೊಲೀಸ್ ಇಲಾಖೆ ಸಿಬ್ಬಂದಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ.
Advertisement
ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆ ಪೇದೆ ಬಿ.ವಿ.ರಮೇಶ್ ಅವರನ್ನು ಕರ್ತವ್ಯ ಲೋಪ, ದುರ್ನಡತೆ ಕಾರಣ ನೀಡಿ ಎಸ್‍ಪಿ ಡಿ.ದೇವರಾಜ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಡ್‌ಶೀಟ್‌ನಲ್ಲಿ ಆನೆ ದಂತ ಸಾಗಾಟ, ಮೂವರು ಅರೆಸ್ಟ್, ಓರ್ವ ಪರಾರಿ
Advertisement
Advertisement
ರಮೇಶ್ ಮಾಲೂರು ಹಾಗೂ ಮಾಸ್ತಿ ಪೊಲೀಸ್ ಸಿಬ್ಬಂದಿಗಳಾದ ವೆಂಕಟರಾಮಯ್ಯ, ನಾಗೇಂದ್ರ, ವೆಂಕಟೇಶಪ್ಪ ವಿರುದ್ಧ ವಾಟ್ಸ್‌ಆಪ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ, ಮರಳು ಮಾಫಿಯಾ, ಜೂಜಾಟ ಹಾಗೂ ಹಲವು ದಂಧೆಗಳಲ್ಲಿ ಮೂವರು ಸಿಬ್ಬಂದಿ ಭಾಗಿಯಾಗಿದ್ದಾರೆಂದು ವಾಟ್ಸಾಪ್‍ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದರು.
Advertisement
ಈ ಪೋಸ್ಟ್ ವೈರಲ್ ಆಗಿದ್ದು, ರಮೇಶ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಮಾಸ್ತಿ ಇನ್ಸ್‌ಪೆಕ್ಟರ್ ವಸಂತ್ ನೀಡಿದ ವರದಿ ಆಧಾರದಲ್ಲಿ ದೇವರಾಜ್ ಅವರು ರಮೇಶ್‍ನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ