ತಿರುವಂತನಪುರಂ: ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವಧುವಿನ ವೇಷದಲ್ಲಿ ಪೋಸ್ ಕೊಟ್ಟು ನರ್ಸ್ ಒಬ್ಬಳು ವ್ಯಕ್ತಿಗೆ ಬರೋಬ್ಬರಿ 15 ಲಕ್ಷ ಮೋಸ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಇದೀಗ ಕೊಚ್ಚಿ ಪೊಲೀಸರು ಸೇನೆಯಲ್ಲಿ ಉದ್ಯೋಗದಲ್ಲಿದ್ದ ನರ್ಸ್ ಸ್ಮಿತಾ(43)ಳನ್ನು ಬಂಧಿಸಿದ್ದಾರೆ. ಈಕೆ ತಿರುವನಂತಪುರಂನ ವೆಟ್ಟಮುಕ್ಕುವಿನ ಸೌಂದರ್ಯ ಹೌಸ್‍ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಸ್ಮಿತಾ ಪ್ಯಾಂಗೋಡ್ ಸೇನಾ ಕ್ಯಾಂಪ್‍ನ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಯ ವಿರುದ್ಧ ವ್ಯಕ್ತಿಯೊಬ್ಬ 15 ಲಕ್ಷ ರೂ. ವಂಚನೆ ಮಾಡಿದ್ದಾಳೆ ಎಂದು ದೂರ ದಾಖಲಿಸಿದ್ದ. ಆ ವ್ಯಕ್ತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಸ್ಮಿತಾಳನ್ನು ಬಂಧಿಸಿದ್ದಾರೆ.
Advertisement
Advertisement
ವಂಚಿಸಿದ್ದು ಹೇಗೆ?
ಆರೋಪಿ ಸ್ಮಿತಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ನಕಲಿ ಖಾತೆ ತೆರೆದು ನಾನು ಸೂಕ್ತ ವರನನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡು ವಧುವಿನ ವೇಷ ಹಾಕಿಕೊಂಡು ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಇದನ್ನು ನೋಡಿದ ವ್ಯಕ್ತಿ ಆಕೆಯ ಜೊತೆ ಚಾಟಿಂಗ್ ಆರಂಭಿಸಿದ್ದಾನೆ. ಈ ವೇಳೆ ಸ್ಮಿತಾ ನಾನು ಮಲೆಯಾಳಿ ಕುಟುಂಬದ ಹುಡುಗಿ, ನಾವು ಮುಂಬೈನಲ್ಲಿ ನೆಲೆಸಿದ್ದೇವೆ. ನಾನು ಎಂಬಿಬಿಎಸ್ ಮುಗಿಸಿ ನಂತರ ಕೋಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ (ಎಂಡಿ) ವ್ಯಾಸಂಗ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
Advertisement
ದಿನ ಕಳೆದಂತೆ ಇಬ್ಬರು ಫೋನ್ ನಂಬರ್ ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದ್ದರು. ಸ್ವಲ್ಪ ದಿನದ ನಂತರ ಆಕೆ ತನ್ನ ಪೋಷಕರ ಫೋಟೋಗಳನ್ನು ಕಳುಹಿಸಿ ನಮ್ಮಿಬ್ಬರ ಮದುವೆಯ ಬಗ್ಗೆ ಮಾತನಾಡಿ ಒಪ್ಪಿಸಿ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ವ್ಯಕ್ತಿ ಆಕೆಯನ್ನು ನಂಬಿದ್ದಾನೆ. ವ್ಯಕ್ತಿಯ ನಂಬಿಕೆ ಗಳಿಸಿದ ನಂತರ ತನಗೆ ತುರ್ತು ಅಗತ್ಯವಿರುವುದರಿಂದ 15 ಲಕ್ಷ ಹಣ ಕೊಡುವಂತೆ ಕೇಳಿದ್ದಾಳೆ.
Advertisement
ವ್ಯಕ್ತಿ ಹಣ ಕೊಟ್ಟ ಬಳಿಕ ನಿಧಾನವಾಗಿ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಕೆಲವು ದಿನಗಳ ನಂತರ ನನಗೆ ಕ್ಯಾನ್ಸರ್ ಇದೆ. ಹೀಗಾಗಿ ನಾವಿಬ್ಬರು ಮದುವೆಯಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವ್ಯಕ್ತಿ ತಾನು ಹುಡುಗಿಗೆ ಹಣ ನೀಡಿ ಮೋಸ ಹೋಗಿರುವುದನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದ.
ಕೆಲವು ದಿನಗಳ ನಂತರ ಮ್ಯಾಟ್ರಿಮೋನಿ ಸೈಟ್‍ನಲ್ಲಿ ಅಂಥಹದ್ದೇ ಮತ್ತೊಂದು ಪ್ರೊಫೈಲ್ ನೋಡಿದಾಗ ಅನುಮಾನಗೊಂಡು ಮತ್ತೆ ಆಕೆಯ ಜೊತೆ ಚಾಟಿಂಗ್ ಮಾಡಿದ್ದಾನೆ. ಆಗ ಮೋಸ ಮಾಡಿದ್ದ ಮಹಿಳೆಯ ರೀತಿಯಲ್ಲಿ ಆಕೆಯೂ ಮಾತನಾಡುತ್ತಿದ್ದಳು. ಆಗ ಅನುಮಾನಗೊಂಡು ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ಆಕೆಯ ವಿವರನ್ನು ತೆಗೆದುಕೊಂಡು ಪರಿಶೀಲನೆ ಮಾಡಿದ್ದಾರೆ. ಆಗ ನರ್ಸ್ ಸಿಕ್ಕಿಹಾಕಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.