ಬೆಂಗಳೂರು: ಅಪ್ರಾಪ್ತೆಯರ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಿದ್ದ ಕಾಮುಕನನ್ನು ಆತನ ಹೆಂಡತಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಳಿಮಾವಿನಲ್ಲಿ ನಡೆದಿದೆ.
ಪೊಕ್ಸೋ ಕಾಯ್ದೆ ಅಡಿ ಹುಳಿಮಾವು ನಿವಾಸಿ ಮೆಕ್ಯಾನಿಕ್ ಉದ್ಯೋಗ ಮಾಡುತ್ತಿದ್ದ ಕಿರಣ್ ಅಲಿಯಾಸ್ ತೂತು ಕಿರಣ್ ನನ್ನು ಪೊಲೀಸರು ಈಗ ಬಂಧಿಸಿದ್ದಾರೆ.
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಈತ ಯುವತಿಯರಿಗೆ ವಂಚಿಸುತ್ತಿರುವ ವಿಚಾರ ತಿಳಿದು ಪತ್ನಿ ಈ ಹಿಂದೆ ಎಚ್ಚರಿಕೆ ನೀಡಿದ್ದಳು. ಆದರೂ ಈತ ತನ್ನ ಚಾಳಿಯನ್ನು ಮುಂದುವರಿಸಿದ್ದ. ಕಿರಣ್ ವಾಸವಿದ್ದ ಪಕ್ಕದ ಮನೆಯ ಬೀದಿಯ ಹುಡುಗಿಯ ಮೇಲೆ ಅತ್ಯಾಚಾರಗೈದು ಮೂರು ತಿಂಗಳ ಗರ್ಭಿಣಿ ಮಾಡಿದ್ದ. ಈ ವಿಚಾರ ಪತ್ನಿಗೆ ತಿಳಿದು ಈಗ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದು ಪತಿ ವಿರುದ್ಧ ದೂರು ನೀಡಿದ್ದಾಳೆ. ಈ ದೂರಿನ ಆಧಾರದ ಹಿನ್ನೆಲೆಯಲ್ಲಿ ಪೊಲೀಸರು ಈಗ ಬಂಧಿಸಿದ್ದಾರೆ.
Advertisement
ಬಂಧಿತ ಕಿರಣ್ ಗೆ ಮದುವೆಯಾಗಿ ಒಂದು ಗಂಡು ಮಗುವಿದೆ. ಆದರು ಅಮಾಯಕ ಶಾಲಾ ಬಾಲಕಿಯರನ್ನು ಪ್ರೀತಿಸುವ ನಾಟಕವಾಡಿ ಬಲೆಗೆ ಬೀಳಿಸುತ್ತಿದ್ದ. ನಂತರ ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್ ನಲ್ಲಿ ಸಿನಿಮಾ ತೋರಿಸಿ ಮಾಲ್ ಸುತ್ತಿಸಿಕೊಂಡು ಕುರುಕಲು ತಿಂಡಿಯನ್ನು ಬ್ಯಾಗ್ ಗೆ ತುಂಬಿಸಿ ನಂಬಿಸಿ ಅತ್ಯಾಚಾರ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. 8ಕ್ಕೂ ಹೆಚ್ಚು ಮಂದಿಗೆ ಮಂದಿಗೆ ನಂಬಿಸಿ ಮೋಸ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕೆಲವರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿದ್ದಾನೆ ಎನ್ನುವ ಆರೋಪವೂ ಕೇಳಿ ಬಂದಿದೆ.
Advertisement
ಇಷ್ಟೊಂದು ಧೈರ್ಯ ಹೇಗೆ?
ಈ ಹಿಂದೆ ಹಲವು ಪ್ರಕರಣಗಳಲ್ಲಿ ಈತನ ಮೇಲೆ ಯುವತಿಯ ಕಡೆಯುವರು ಹೊಡೆದು ಎಚ್ಚರಿಕೆ ನೀಡಿದ್ದರು. ಆದರೆ ಯುವತಿಯ ಭವಿಷ್ಯವನ್ನು ನೋಡಿಕೊಂಡು ಯಾರೂ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿರಲಿಲ್ಲ. ಹೀಗಾಗಿ ಈತ ಧೈರ್ಯವಾಗಿ ಯುವತಿ/ ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ತನ್ನ ಕೃತ್ಯವನ್ನು ಎಸಗುತ್ತಿದ್ದ.