ಲಿಸ್ಬನ್: ಪೋರ್ಚುಗಲ್‌ನ (Portugal) ಕರಾವಳಿ ಪಟ್ಟಣದಲ್ಲಿ 22 ಲಕ್ಷ ಲೀಟರ್‌ನಷ್ಟು ರೆಡ್ ವೈನ್ ರಸ್ತೆಯಲ್ಲಿ ಪ್ರವಾಹದಂತೆ ಹರಿಯಿತು. ಈ ದೃಶ್ಯ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು.
ವೈನ್ ಒಯ್ಯುವ ಎರಡು ಕಂಟೈನರ್ ವಾಹನಗಳು ಸ್ಫೋಟಗೊಂಡವು. ಪರಿಣಾಮವಾಗಿ ವಾಹನಗಳಲ್ಲಿದ್ದ ಲಕ್ಷಾಂತರ ಲೀಟರ್‌ನಷ್ಟು ರೆಡ್ ವೈನ್ ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿಯಿತು. ಸಾವೊ ಲೊರೆಂಕೊ ಡಿ ಬೈರೊ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ
Advertisement
The citizens of Levira, Portugal were in for a shock when 2.2 million liters of red wine came roaring down their streets on Sunday. The liquid originated from the Levira Distillery, also located in the Anadia region, where it had been resting in wine tanks awaiting bottling. pic.twitter.com/lTUNUOPh9B
— Boyz Bot (@Boyzbot1) September 12, 2023
Advertisement
ಪ್ರವಾಹದ ನೀರು ನುಗ್ಗಿದಂತೆ ಸ್ಥಳೀಯ ಮನೆಗಳಿಗೆ ವೈನ್ ನುಗ್ಗಿತು. ಇದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಹ ಉಂಟಾಯಿತು. ರೆಡ್ ವೈನ್ ಹರಿಯುತ್ತಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಸೆರ್ಟಿಮಾ ನದಿ ಇತ್ತು. ವೈನ್ ನದಿ ಸೇರಿದರೆ, ನೀರು ಕಲುಷಿತಗೊಳ್ಳಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ವೈನ್ ಹರಿಯುತ್ತಿದ್ದ ದಿಕ್ಕನ್ನು ಬದಲಾಯಿಸುವ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಪುಟಿನ್ ಭೇಟಿ ಮಾಡಲು ರಷ್ಯಾಗೆ ತೆರಳಿದ ಕಿಮ್ ಜಾಂಗ್ ಉನ್
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಆಗಿರುವ ಹಾನಿಯನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ಸ್ವಚ್ಛಗೊಳಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಲೆವಿರಾ ಡಿಸ್ಟಿಲರಿ ತಿಳಿಸಿದೆ.
Web Stories