ಚಾಮರಾಜನಗರ: ಸರ್ಕಾರಿ ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಮುದ್ರಿಸುವ ಮೂಲಕ ಚಾಮರಾಜನಗರ (Chamarajanagara) ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದೆ. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಹನೂರಿನ ಕ್ರಿಸ್ತರಾಜ ಪ.ಪೂ. ಕಾಲೇಜು ಹಾಗೂ ಮಾರ್ಟಳ್ಳಿಯ ಸೇಂಟ್ ಮೇರಿಸ್, ಪ.ಪೂ. ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಪ್ರಶಸ್ತಿ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಮುದ್ರಣ ಮಾಡಲಾಗಿತ್ತು. ಇದನ್ನೂ ಓದಿ: ವಾಲ್ಮೀಕಿ ಹಗರಣ – ನಾಗೇಂದ್ರ ಆಪ್ತರ ಮನೆ ಮೇಲೆ ED ದಾಳಿ
ಗಣೇಶ, ಸರಸ್ವತಿ ಪೂಜೆ ಮಾಡಿದರೆ ಕೋಮುವಾದ ಅನ್ನುವವರಿಗೆ ಇದು ಕಾಣಿಸುವುದಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್