Connect with us

Bengaluru City

ನಾಳೆ ಖಾತೆ ಹಂಚಿಕೆ ಫಿಕ್ಸ್- ಖಚಿತಪಡಿಸಿದ ಸಿಎಂ

Published

on

– ಪಿ.ವಿ.ಸಿಂಧುಗೆ 5 ಲಕ್ಷ ರೂ. ಪ್ರೋತ್ಸಾಹ ಧನ

ನವದೆಹಲಿ: ಕೊನೆಗೂ ಖಾತೆ ಹಂಚಿಕೆಗೆ ಕಾಲ ಕೂಡಿ ಬಂದಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಖಾತೆಗಳ ಪಟ್ಟಿ ರವಾನೆಯಾಗಲಿದೆ. ನಾಳೆಯೇ ಖಾತೆ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾತೆ ಹಂಚಿಕೆ ಬಳಿಕ ನಾಳೆ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ನೆರೆ ಪರಿಸ್ಥಿತಿ ಬಗ್ಗೆ ವರದಿ ಕೇಳಿದ್ದೆ, ನಾಳೆ ವರದಿ ಪಡೆದು ಮುಂದಿನ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಹೀಗಾಗಿ ರಾಜ್ಯಕ್ಕೆ ಮೊದಲು ಅಧ್ಯಯನ ತಂಡ ಕಳುಹಿಸಲಾಗಿದೆ. ತಂಡ ಈಗಾಗಲೇ ಅಧ್ಯಯನ ಪ್ರಾರಂಭಿಸಿದ್ದು, ವರದಿ ನೀಡಿದ ಬಳಿಕ ಹೆಚ್ಚಿನ ನೆರವು ಪಡೆಯಲಿದ್ದೇವೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಹುದ್ದೆ ಇರುತ್ತದೆ. ಯಾರು, ಎಷ್ಟು ಎಂಬುದು ನಾಳೆ ಗೊತ್ತಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ, ಡಿಸಿಎಂ ಹುದ್ದೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಹೈಕಮಾಂಡ್ ಸೂಚನೆಗಳನ್ನು ಪಾಲಿಸುತ್ತೇವೆ. ಎಷ್ಟು ಡಿಸಿಎಂ ಸ್ಥಾನ ಅನ್ನೊದು ಚರ್ಚೆ ನಡೆಯುತ್ತಿದೆ. ನಾಳೆ ಅಂತಿಮವಾಗಿ ಗೊತ್ತಾಗಲಿದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತ ಶಾಸಕರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರ ಬಗ್ಗೆ ಮಾತನಾಡುವುದಿಲ್ಲ. ಈ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಈಗೇನಿದ್ದರೂ ಸಮಸ್ಯೆ ಕಾಂಗ್ರೆಸ್ ಜೆಡಿಎಸ್‍ನಲ್ಲಿ ಮಾತ್ರ ಎಂದು ಅನರ್ಹ ಶಾಸಕರ ಕುರಿತು ಬಿಎಸ್‍ವೈ ಮಾತನಾಡನಲಿಲ್ಲ. ಲಕ್ಷ್ಮಣ ಸವದಿ ಬಗ್ಗೆ ಕೆಲವು ಶಾಸಕರು ಹಾಗೂ ನಾಯಕರಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸವದಿಗೆ ಅವಕಾಶ ನೀಡಲಾಗಿದೆ. ಬೆಳಗಾವಿಯಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನಿಡಿದರು.

ಸಿಂಧುಗೆ 5 ಲಕ್ಷ ಪ್ರೋತ್ಸಾಹ ಧನ:
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಿ.ವಿ.ಸಿಂಧು ಅವರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೇ ಈ ಕುರಿತು ಮಾಹಿತಿ ನೀಡಿದ್ದು, ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ, ಹೀಗಾಗಿ ಅವರಿಗೆ ಪ್ರೋತ್ಸಾಹ ಧನ ಘೋಷಿಸಲಾಗಿದೆ ಎಂದು ಬಿಎಸ್‍ವೈ ತಿಳಿಸಿದ್ದಾರೆ.

ಪಿ.ವಿ.ಸಿಂಧು ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶ ಮಾಡಿದ್ದರು. ಆದರೆ ಪ್ರಶಸ್ತಿಯಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. 24 ವರ್ಷದ ಹೈದರಾಬಾದ್‍ನ ಆಟಗಾರ್ತಿ ಪಿ.ವಿ.ಸಿಂಧು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜಪಾನ್‍ನ ಒಕುಹಾರ ಅವರನ್ನು 21-7, 21-7 ಗೇಮ್‍ಗಳಿಂದ ಸೋಲಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ನಲ್ಲಿ ಸಿಂಧು ಅವರು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಈ ಬಾರಿಯ ಫೈಲನ್ ಪ್ರವೇಶದಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ಪ್ರಶಸ್ತಿ ಗೆದ್ದಿದ್ದಾರೆ.

Click to comment

Leave a Reply

Your email address will not be published. Required fields are marked *