ಬೆಂಗಳೂರು: ಮಂಗಳೂರು (Mangaluru) ಮತ್ತು ಕಾರವಾರದಲ್ಲಿ (Karawara) ಬಂದರು ನಿರ್ಮಾಣ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಮಂಕಾಳ್ ವೈದ್ಯ (Mankal Vaidya) ತಿಳಿಸಿದ್ದಾರೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಮಂಕಾಳ್ ವೈದ್ಯ, ಕಾರವಾರ, ಮಂಗಳೂರಿನಲ್ಲಿ ಬಂದರು ಮಾಡಲು ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ. 1 ಕೋಟಿ ರೂ. ನಿಂದ 1 ಸಾವಿರ ಕೋಟಿ ರೂ.ನಲ್ಲಿ ಬಂದರು (Port) ಮಾಡಬಹುದು. ಯಾವ ಮಾದರಿಯಲ್ಲಿ ಬಂದರು ಮಾಡಬೇಕು ಎಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಬಂದರು ಮಾಡಲು ಚರ್ಚೆಯಾಗಿದೆ. ಆದಷ್ಟು ಬೇಗ ಇದಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡುವುದಾಗಿ ತಿಳಿಸಿದರು.
Advertisement
ಇಂದು ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಕೊಠಡಿಯಲ್ಲಿ,ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಇಲಾಖೆಗೆ ಸಂಬಂದಿಸಿದಂತೆ ಇಲಾಖಾ ವಿಷಯಗಳ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಮತ್ತು ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ನಡೆಸಲಾಯಿತು pic.twitter.com/V3d7HIgoDK
— Mankal S Vaidya • ಮಂಕಾಳ.ಎಸ್.ವೈದ್ಯ (@MankalSVaidya) November 9, 2023
Advertisement
ಮೀನುಗಾರರಿಗೆ 200 ಲೀಟರ್ ಡೀಸೆಲ್ ಕೊಡುವುದಾಗಿ ಹೇಳಿದ್ದೇವೆ ಅದನ್ನು ಕೊಡುತ್ತೇವೆ. ಮೀನುಗಾರರಿಗೆ ಸೀಮೆಎಣ್ಣೆ ಬಗ್ಗೆ ಸಮಸ್ಯೆ ಇತ್ತು. ಇದರಿಂದ ಮೀನುಗಾರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ 10 ತಿಂಗಳು ಬಿಳಿ ಸೀಮೆಎಣ್ಣೆಯನ್ನು ಸರ್ಕಾರವೇ ಖರೀದಿ ಮಾಡಿ 35 ರೂಪಾಯಿ ಸಬ್ಸಿಡಿ ದರದಲ್ಲಿ ಮೀನುಗಾರಿಕೆ (Fishing) ಮಾಡುವವರಿಗೆ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೊಡುತ್ತಿಲ್ಲ. ಹೀಗಾಗಿ ದೇಶದಲ್ಲಿ ಮೊದಲ ಬಾರಿಗೆ ನಾವೇ ಸೀಮೆಎಣ್ಣೆ ಕೊಡುತ್ತಿದ್ದೇವೆ. ಸರ್ಕಾರ 300 ಲೀಟರ್ ನೀಡಲು ಸಿದ್ದ ಎಂದು ಹೇಳಿದರು. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್, ಪತ್ನಿ ಅಕ್ಷತಾ ಮೂರ್ತಿ
Advertisement
ಬೆಂಗಳೂರಿನಲ್ಲಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು 8 ಲಕ್ಷ ಮೌಲ್ಯದ ಮೀನುಗಾರರಿಗೆ ಮೀನು ಮಾರಾಟ ಮಾಡುವ ಗಾಡಿ ಕೊಡುತ್ತಿದ್ದೇವೆ. 300 ಗಾಡಿ ಪೈಕಿ ಬೆಂಗಳೂರಿಗೆ 150 ಗಾಡಿ ಕೊಡುತ್ತಿದ್ದೇವೆ. ಸರ್ಕಾರ ಸೆಕ್ಯುರಿಟಿ ಫಂಡ್ ಹೆಸರಿನಲ್ಲಿ ಫಲಾನುಭವಿಗಳಿಂದ 2 ಲಕ್ಷ ರೂ. ಡೆಪಾಸಿಟ್ ಪಡೆದುಕೊಳ್ಳುತ್ತದೆ. ಎಸ್‌ಸಿ ಎಸ್‌ಟಿ ಫಲಾನುಭವಿಗಳಿಂದ 1.5 ಲಕ್ಷ ರೂ. ಡೆಪಾಸಿಟ್ ತೆಗೆದುಕೊಳ್ಳುತ್ತೇವೆ ಎಂದರು.
Advertisement
3 ಜಿಲ್ಲೆಗಳಲ್ಲಿ 13 ಐಲ್ಯಾಂಡ್ ಗುರುತಿಸಿದ್ದು, ಅಭಿವೃದ್ಧಿ ಮಾಡಲು ಪಿಪಿಪಿ ಮಾಡೆಲ್ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಐಲ್ಯಾಂಡ್ ಅಭಿವೃದ್ಧಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಈ ನಿಟ್ಟಿನಲ್ಲಿ ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದರು. ಅಂಕೋಲದಲ್ಲಿ (Ankola) ವಿಮಾನ ನಿಲ್ದಾಣಕ್ಕೆ (Air Port) ಬೇಕಾದ ಜಮೀನು ಖರೀದಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.