ನಗರಸಭೆ ಆವರಣದ ಬೃಹತ್ ಟಿವಿ ಪರದೆಯಲ್ಲಿ 5 ನಿಮಿಷ ಬ್ಲೂ ಫಿಲಂ ಪ್ರದರ್ಶನ!

Public TV
1 Min Read
mdk 6

ಮಡಿಕೇರಿ: ನಗರಸಭೆ ಆವರಣದಲ್ಲಿ ಅಳವಡಿಸಲಾದ ಬೃಹತ್ ಟಿವಿ ಪರದೆಯಲ್ಲಿ ಅಶ್ಲೀಲ ಚಿತ್ರ ಪ್ರದರ್ಶನಗೊಂಡು ಇಡೀ ಆಡಳಿತ ಮಂಡಳಿ ಮುಜುಗರಕ್ಕೀಡಾದ ಘಟನೆ ಮಡಿಕೇರಿ ನಗರಸಭೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

mdk 4

ಈ ಘಟನೆ ನಡೆದಿರುವುದು ಜುಲೈ 6ರ ಗುರುವಾರದಂದು. ಎಂದಿನಂತೆ ಟಿವಿ ಪರದೆಮೇಲೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರೋ ಕಾಮಗಾರಿಗಳು ಯಾವುವು? ಜನರು ತಮ್ಮ ದಾಖಲೆಗಳಿಗಾಗಿ ಸಲ್ಲಿಸಿರೋ ಅರ್ಜಿಗಳ ಸ್ಟೇಟಸ್ ಏನು? ಎಂಬುದೆಲ್ಲಾ ಬಿತ್ತರವಾಗುತ್ತಿತ್ತು. ಆದ್ರೆ ಮಧ್ಯಾಹ್ನದ ಸಮಯದಲ್ಲಿ ಅಶ್ಲೀಲ ವೀಡಿಯೋವೊಂದು ಇದ್ದಕ್ಕಿದ್ದಂತೆ ಪ್ರಸಾರವಾಗೋಕೆ ಶುರುವಾಗಿದೆ. ಈ ವಿಚಾರ ತಿಳಿಯುತ್ತಲೇ ಸುತ್ತಮುತ್ತಲ ಅಂಗಡಿಯಲ್ಲಿದ್ದ ಜನರೆಲ್ಲಾ ಓಡಿ ಬಂದಿದ್ದಾರೆ. ಖುದ್ದು ನಗರಸಭೆ ಸಿಬ್ಬಂದಿಯೂ ಅಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯ ಕಂಡು ಹೌಹಾರಿದ್ದಾರೆ.

mdk 2

ಇದ್ಹೇಗೆ ಇಲ್ಲಿ ಪ್ರಸಾರವಾಗುತ್ತಿದೆ? ಇದನ್ನ ಆಫ್ ಮಾಡಿ…ಆಫ್ ಮಾಡಿ…. ಅಂತ ಕೂಗಾಡೋಕೆ ಶುರುಮಾಡಿದ್ದಾರೆ. ಆದ್ರೆ ಗಡಿಬಿಡಿಯಲ್ಲಿ ಏನು ಮಾಡೋದೆಂದು ಯಾರಿಗೂ ತಿಳಿದಿಲ್ಲ. ಅಷ್ಟರಲ್ಲಿ ಐದಾರು ನಿಮಿಷ ಸಾರ್ವಜನಿಕವಾಗಿ ಬ್ಲೂ ಫಿಲಂ ಪ್ರದರ್ಶನಗೊಂಡಿದೆ.

mdk 5

ಜನರಿಗೆ ಮಾಹಿತಿ ನೀಡಬೇಕಿದ್ದ ಟಿವಿ ಪರದೆಯಲ್ಲಿ ಖುಲ್ಲಂಖುಲ್ಲಾ ಬ್ಲೂ ಫಿಲಂ ಪ್ರಸಾರವಾಗಿರುವುದು ನಗರಸಭೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರನ್ನೂ ಮುಜಗರಕ್ಕೀಡು ಮಾಡಿದೆ. ಅಶ್ಲೀಲ ವೀಡಿಯೋ ಪ್ರದರ್ಶನದ ಬಗ್ಗೆ ಯೋಜನಾ ನಿರ್ದೇಶಕ ಮುನೀರ್ ಅವರಿಂದ ನಗರಸಭೆಯಲ್ಲಿ ತನಿಖೆ ನಡೆಯುತ್ತಿದೆ. ಸಿಬಂದ್ದಿ ಕರೆಸಿ ಯೋಜನಾ ಅಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ.

mdk

mdk 1

mdk 3

Share This Article
Leave a Comment

Leave a Reply

Your email address will not be published. Required fields are marked *