ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಕ್ರಮ ಸಂಬಂಧದ ಕುರಿತ ಆರೋಪ ಕೇಳಿ ಬಂದಿದ್ದು, 2006ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಟ್ರಂಪ್ ತನ್ನ ವಕೀಲನ ಮೂಲಕ ನೀಲಿ ಚಿತ್ರಗಳಲ್ಲಿ ನಟಿಸುವ ನಟಿಗೆ ಹಣವನ್ನು ಸಂದಾಯ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಮೆರಿಕದ ನೀಲಿ ಚಿತ್ರಗಳ ಸ್ಟಾರ್ ನಟಿಯಾಗಿರುವ ಸ್ಟಿಫಾನಿ ಕ್ಲಿಫೋರ್ಡ್‍ಗೆ, ಟ್ರಂಪ್ ಪರ ವಕೀಲ ಮೈಕೆಲ್ ಕೋಹೆನ್, ಸುಮಾರು 1.30 ಲಕ್ಷ ಡಾಲರ್(ಅಂದಾಜು 82 ಲಕ್ಷ ರೂ.) ಹಣ ನೀಡಿದ್ದರು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ತನ್ನ ಹಾಗೂ ನಟಿ ನಡುವಿನ ಸಂಬಂಧ ಸಾರ್ವಜನಿಕವಾಗಿ ಬಯಲಾಗದೇ ಇರಲು ಟ್ರಂಪ್ ತನ್ನ ವಕೀಲನ ಮೂಲಕ ಭಾರೀ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ
Advertisement
Advertisement
2006 ರಲ್ಲಿ ಅಧ್ಯಕ್ಷ ಟ್ರಂಪ್ ಅವರು ತಮ್ಮ ಮೂರನೇ ಪತ್ನಿ ಮೆಲನಿಯಾರನ್ನು ವಿವಾಹವಾಗಿದ್ದು, ವಿವಾಹಕ್ಕೂ ಕೆಲ ದಿನಗಳ ಹಿಂದಷ್ಟೇ ಈ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ. ಅಲ್ಲದೇ ಟ್ರಂಪ್ ಪರ ವಕೀಲ ಈ ಹಣವನ್ನು ಲಾಸ್ ಏಂಜಲೀಸ್‍ನ ಸಿಟಿ ನ್ಯಾಷನಲ್ ಬ್ಯಾಂಕ್ ಮೂಲಕ ತಲುಪಿಸಿದ್ದಾರೆ ಎಂದು ತಿಳಿಸಿದೆ. ಆದರೆ ಈ ಕುರಿತ ಬ್ಯಾಂಕ್ ದಾಖಲೆಗಳ ಕುರಿತು ಪತ್ರಿಕೆ ಮಾಹಿತಿ ನೀಡಿಲ್ಲ.
Advertisement
ಆರೋಪ ನಿರಾಕರಣೆ: ಈ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ಮೈಕೆಲ್ ಕೋಹೆನ್, 2011ರಲ್ಲೂ ಟ್ರಂಪ್ ಅವರ ಮೇಲೆ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಆ ವೇಳೆಯೂ ಟ್ರಂಪ್ ಅವರು ಇಂತಹ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೆ ಆರೋಪದಲ್ಲಿ ಹೇಳಲಾಗಿರುವ ನೀಲಿ ಚಿತ್ರಗಳ ಪೋರ್ನ್ ಸ್ಟಾರ್ ಅವರ ಹೆಸರು ಸ್ಟಿಫಾನಿ ಕ್ಲಿಪೋರ್ಡ್ ಅಲ್ಲ, ಸ್ಟಾರ್ಮಿ ಡೇನಿಯಲ್ಸ್ ಎಂದು ಹೇಳಿದ್ದಾರೆ.
Advertisement
2016 ರಲ್ಲಿ ಟ್ರಂಪ್ ಅವರೊಂದಿಗೆ ತನಗಿರುವ ಸಂಬಂಧದ ಕುರಿತು ಮಾಹಿತಿ ಬಹಿರಂಗ ಪಡಿಸಲು ಅಮೆರಿಕದ ಪತ್ರಿಕೆಯೊಂದಿಗೆ ಮಾತುಕತೆ ನಡೆಸಿದ್ದರು, ಆದರೆ ಈ ವೇಳೆ ಸುದ್ದಿ ಪ್ರಸಾರವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಟಾರ್ ನಟಿ ಹೇಳಿದ್ದೇನು: ಟ್ರಂಪ್ ಅವರ ಜೊತೆಗಿನ ಆಕ್ರಮ ಸಂಬಂಧದ ವರದಿಯ ಕುರಿತು ನಟಿ ಹೇಳಿಕೆಯನ್ನು ಇದೇ ವೇಳೆ ನೀಡಲಾಗಿದ್ದು, ಟ್ರಂಪ್ ಅವರಿಂದ ಹಣ ಪಡೆಯಲಾಗಿದೆ ಎಂಬ ಆರೋಪ ಸುಳ್ಳು, ಒಂದು ವೇಳೆ ಟ್ರಂಪ್ ಅವರ ಜೊತೆ ಸಂಬಂಧ ಹೊಂದಿದ್ದರೆ, ಇದನ್ನು ಇಂತಹ ವರದಿಗಳಲ್ಲಿ ಓದುವ ಅಗತ್ಯವಿರಲಿಲ್ಲ. ನನ್ನ ಪುಸ್ತಕದಲ್ಲೇ ಈ ಕುರಿತು ನಿಮಗೇ ಮಾಹಿತಿ ನೀಡುತ್ತಿದೆ ಎಂದು ನಟಿ ಸಹಿ ಮಾಡಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಟ್ರಂಪ್ ಪರ ವಕೀಲ ಕೋಹಿನ್ `ಫಿಕ್ಸ್ ಇಟ್ ಮ್ಯಾನ್’ ಎಂಬ ಅಪಖ್ಯಾತಿಗೆ ಒಳಗಾಗಿದ್ದು ಅವರ ಮೇಲೆ ಆರೋಪಗಳು ಬರುವುದು ಹೊಸದೆನಲ್ಲ. ಈ ಹಿಂದೆ 2016ರ ಅಧ್ಯಕ್ಷಕೀಯ ಚುನಾವಣೆಯಲ್ಲಿ ರಷ್ಯಾ ಜೊತೆಗೆ ಮಾತುಕತೆ ನಡೆಸಿದ ಆರೋಪವು ಅವರ ಮೇಲೆ ಕೇಳಿ ಬಂದಿತ್ತು.
ಸ್ಟಿಫಾನಿ ಕ್ಲಿಪೋರ್ಡ್ ತಾಯಿ ಹೇಳಿದ್ದೇನು?: ಟ್ರಂಪ್ ಪರ ವಕೀಲ ನಟಿ ಕ್ಲಿಪೋರ್ಡ್ ಅವರಿಗೆ ಹಣ ನೀಡಿದ್ದಾರೆ ಎನ್ನುವ ಆರೋಪದ ಕುರಿತು ನಟಿ ತಾಯಿ ಶೀಲಾ ವೀಮರ್ ಪ್ರತಿಕ್ರಿಯೇ ನೀಡಿದ್ದು, ತಾನು ತನ್ನ ಮಗಳೊಂದಿಗೆ 12 ವರ್ಷಗಳಿಂದ ಸಂಪರ್ಕದಲ್ಲಿ ಇಲ್ಲ. ಹಣ ನೀಡಿರುವ ಕುರಿತು ಮಾಹಿತಿಯೂ ಇಲ್ಲ. ಅಲ್ಲದೇ ತಮ್ಮ ಮಗಳು ವಯಸ್ಕ ಚಿತ್ರಗಳಲ್ಲಿ ನಟಿಸುತ್ತಿರುವ ಕುರಿತು ಮಾಹಿತಿ ಇಲ್ಲ, ಆದರೆ ವಯಕ್ತಿಕವಾಗಿ ನಾನು ಟ್ರಂಪ್ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಅವರು ದೇಶದಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.