LatestLeading NewsMain PostNational

ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು: ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

ನವದೆಹಲಿ/ ಬೆಂಗಳೂರು: ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು ಎಂಬ ಜನಸಂಖ್ಯಾ ನಿಯಂತ್ರಣಾ ನೀತಿ(Population Control Policy) ಜಾರಿಗೆ ಬರುತ್ತಾ? ಎಲ್ಲಾ ಸಮುದಾಯಗಳಿಗೂ ಈ ನಿಯಮ ಅನ್ವಯ ಆಗುತ್ತಾ ಎಂಬ ಚರ್ಚೆ ಜೋರಾಗುತ್ತಿದೆ.

ಆರ್‌ಎಸ್‍ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat), ವಿಜಯದಶಮಿಯಂದು ನಾಗಪುರದ  ಕಚೇರಿಯಲ್ಲಿ ಬುಧವಾರ ಮಾತನಾಡುತ್ತಾ, ದೇಶದಲ್ಲಿ ಜನಸಂಖ್ಯಾ ನೀತಿ ಅವಶ್ಯಕತೆ ಇದೆ. ಧರ್ಮ(Religion) ಆಧಾರಿತ ಜನಸಂಖ್ಯೆಯ ಅಸಮತೋಲವನ್ನು ಇನ್ನು ನಿರ್ಲಕ್ಷಿಸಲಾಗದು. ಜನಸಂಖ್ಯಾ ಅಸಮತೋಲನ ದೇಶ ವಿಭಜನೆಗೆ ಕಾರಣವಾದೀತು ಅಂತ ಆತಂಕ ವ್ಯಕ್ತಪಡಿಸಿದ್ದರು.

ಮೋಹನ್‌ ಭಾಗವತ್‌ ಹೇಳಿಕೆಯ ಬೆನ್ನಲ್ಲೇ ಜನಸಂಖ್ಯಾ ನೀತಿ ಜಾರಿ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾಗವತ್ ಹೇಳಿಕೆಯನ್ನು ಎಂಐಎಂನ ಅಸಾದುದ್ದೀನ್ ಓವೈಸಿ(Asaduddin Owaisi) ಟೀಕಿಸಿದ್ದಾರೆ. ಜನಸಂಖ್ಯಾ ನಿಯಂತ್ರಣದ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಬೆನ್ನಲ್ಲೇ ಬಿಜೆಪಿ ಮುಖಂಡ ಸಂಗೀತ್ ಸೋಮ್ ಕಿಡಿಕಾರಿದ್ದು, ಒಂದು ಸಮುದಾಯದಿಂದ ದೇಶದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಇದರಿಂದಾಗಿ ಭಯೋತ್ಪಾದನೆಯೂ ಹೆಚ್ಚಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಭಾಗವತ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ವಾಗತಿಸಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯಲ್ಲ ಅಂತ ಓವೈಸಿಗೂ ತಿರುಗೇಟು ನೀಡಿದ್ದಾರೆ. ದೇಶದ ಹಿತದೃಷ್ಠಿಯಿಂದ ಮೋಹನ್ ಭಾಗವತ್ ಸಲಹೆ ಕೊಟ್ಟಿದ್ದಾರೆ. ಸಂಸತ್, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಂದು ಸಿಟಿ ರವಿ ಹೇಳಿದ್ದಾರೆ.

ಟೀಕೆ-ಟಿಪ್ಪಣಿ ಏನೇ ಇರಲಿ, ಮೋಹನ್ ಭಾಗವತ್ ಕೊಟ್ಟ ಸಲಹೆಯನ್ನು ಪ್ರಧಾನಿ ಮೋದಿ(Narendra Modi) ಸ್ವೀಕರಿಸ್ತಾರಾ? ಚೀನಾವನ್ನು ಮೀರಿಸುವಂತೆ ಬೆಳೆಯುತ್ತಿರುವ ಜನಸಂಖ್ಯಾ ಸ್ಫೋಟಕ್ಕೆ ಬ್ರೇಕ್ ಹಾಕ್ತಾರಾ? ಮುಂದಿನ ಎಲೆಕ್ಷನ್‍ಗೆ ಪ್ರಮುಖ ಅಜೆಂಡಾವನ್ನಾಗಿಸಿಕೊಂಡು ಕೇಂದ್ರ ಸರ್ಕಾರವೇ ಸಂಸತ್‍ನಲ್ಲಿ ಮಸೂದೆ ಮಂಡಿಸುತ್ತಾ ಎಂಬೆಲ್ಲ ಪ್ರಶ್ನೆಗಳೊಂದಿಗೆ ಈಗ ಚರ್ಚೆ ಆರಂಭವಾಗಿದೆ.

ಚೀನಾದ(China) ಜನಸಂಖ್ಯೆ 145 ಕೋಟಿ ದಾಟಿದ್ದು, ಭಾರತ 140 ಕೋಟಿ ಹತ್ತಿರ ತಲುಪಿದೆ. ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಬಗ್ಗೆ ಚರ್ಚೆ ಇದೇ ಮೊದಲೇನಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಒಟ್ಟು 35 ಬಾರಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಖಾಸಗಿ ಬಿಲ್ ಮಂಡನೆಯಾಗಿವೆ. ಇದನ್ನೂ ಓದಿ: ‘ಪೊನ್ನಿಯಿನ್ ಸೆಲ್ವನ್ ‘ ಸಿನಿಮಾ ಎಫೆಕ್ಟ್: ‘ಚೋಳ ರಾಜರು ಹಿಂದೂಗಳಲ್ಲ’ ಕಮಲ್ ವಿವಾದಾತ್ಮಕ ಹೇಳಿಕೆ


ಜನಸಂಖ್ಯಾ ನೀತಿ ಚರ್ಚೆ
2019ರಲ್ಲಿ ರಾಜ್ಯಸಭೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಮಸೂದೆಯನ್ನು ಸಂಸದ ರಾಕೇಶ್ ಸಿನ್ಹಾ ಮಂಡಿಸಿದ್ದರು. ಈ ಮಸೂದೆಗೆ 125 ಸದಸ್ಯರು ಸಹಿ ಹಾಕಿದ್ದರು. 2020ರಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ರಾಜ್ಯಸಭೆಯಲ್ಲಿ ಶಿವಸೇನೆಯ ಅನಿಲ್ ದೇಸಾಯಿ ಮಸೂದೆ ಮಂಡಿಸಿದ್ದರು. ದಂಪತಿಗೆ ಎರಡೇ ಮಗು ಕಡ್ಡಾಯ ಮಾಡುವ ನಿಯಮವನ್ನು ಹೊಂದಿತ್ತು.

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸದ್ದಿಲ್ಲದೆ ಜನಸಂಖ್ಯೆ ನಿಯಂತ್ರಣ ನೀತಿ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನೀತಿ 2021-2030 ಕರಡು ಬಿಡುಗಡೆಯಾಗಿದೆ. ಎರಡಕ್ಕಿಂತ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳ ನಿರಾಕಣೆಯ ಅಂಶ ನೀತಿಯಲ್ಲಿದೆ. ಅಸ್ಸಾಂನಲ್ಲೂ 2 ಮಕ್ಕಳ ನೀತಿ ಜಾರಿಯ ಬಗ್ಗೆ ಸಿಎಂ ಹೀಮಾಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button