ಚೆನ್ನೈ: ತಮಿಳಿನ ಜನಪ್ರಿಯ ಹಿನ್ನೆಲೆ ಗಾಯಕ ಮತ್ತು ಜಾನಪದ ಕಲಾವಿದ ಮಾಣಿಕ್ಯ ವಿನಾಯಗಂ(78) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಭಾನುವಾರ ನಿಧನರಾಗಿದ್ದಾರೆ.
Advertisement
ನರ್ತಕಿ ವಜುವೂರ್ ಬಿ ರಾಮಯ್ಯ ಪಿಳ್ಳೈ ಪುತ್ರರಾಗಿರುವ ಮಾಣಿಕ್ಯ ವಿನಾಯಗಂ ತಮಿಳುನಾಡಿನ ಜನಪ್ರಿಯ ಜಾನಪದ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಮಾಣಿಕ್ಯ ವಿನಾಯಗಂ ತಮಿಳು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಮನ್ಮಧ ರಸ (ತಿರುಡ ತಿರುಡಿ), ಸುಬ್ಬಮ್ಮ ಸುಬ್ಬಮ್ಮ (ರೋಜಾ ಕೂಟಂ) ಮತ್ತು ಕಟ್ಟು ಕಟ್ಟು (ತಿರುಪಾಚಿ) ಸೇರಿದಂತೆ ಹಲವು ಜನಪ್ರಿಯ ಗೀತೆಗಳಿಗೆ ಧ್ವನಿ ನೀಡಿದ್ದು, ಸುಮಾರು 800ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ ತಿರುಡಾ ತಿರುಡಿ, ವೆಟ್ಟೈಕಾರನ್, ಸಂತೋಷ್ ಮತ್ತು ಸುಬ್ರಮಣ್ಯಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ
Advertisement
15,000 க்கும் மேற்பட்ட பக்தி பாடல்களும், நாட்டுப்புறப்பாடல்களும், 800 க்கும் மேற்பட்ட திரைப்பட பாடல்களும் பாடிய பிரபல பின்னணி பாடகரும், திரைப்பட நடிகருமான திரு.மாணிக்க விநாயகம் அவர்கள் உடல்நலக்குறைவால் மறைந்த செய்தி வருத்தமளிக்கிறது (1) pic.twitter.com/rphWWbF67t
— R Sarath Kumar (@realsarathkumar) December 26, 2021
Advertisement
ಇದೀಗ ಅವರ ನಿಧನದ ಸುದ್ದಿ ತಮಿಳು ಚಿತ್ರರಂಗಕ್ಕೆ ಬರ ಸಿಡಿಲು ಬಡಿದಂತಾಗಿದ್ದು, ನಟ ಶರತ್‍ಕುಮಾರ್ ಮತ್ತು ಮನೋಬಾಲಾ ಸೇರಿದಂತೆ ಹಲವಾರು ಗಣ್ಯರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಣಿಕ್ಯ ವಿನಾಯಗಂ ಅವರ ಅಂತಿಮ ವಿಧಿವಿಧಾನದ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಕುಟುಂಬಸ್ಥರು ತಿಳಿ ಹೊರಬೀಳಲಿವೆ. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್
Advertisement