ಭುವನೇಶ್ವರ: ಜನಪ್ರಿಯ ಒಡಿಶಾ ಗಾಯಕಿ (Odisha Singer) ರುಕ್ಸಾನಾ ಬಾನೊ ಅವರು ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
27 ವರ್ಷದ ರುಕ್ಸಾನಾ ಸ್ಕ್ರಬ್ ಟೈಫಸ್ (Scrub Typhus) (ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆ) ಚಿಕಿತ್ಸೆಗೆ ಒಳಗಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಸಾವಿಗೆ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ ಅವರಿಗೆ ನಿರಂತರ ಬೆದರಿಕೆಗಳು ಬರುತ್ತಿದ್ದವು, ಜೊತೆಗೆ ತನ್ನ ಪ್ರತಿಸ್ಪರ್ಧಿ ಗಾಯಕನಿಂದಾಗಿ ವಿಷ ಸೇವಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಆಗಿದ್ದೇನು?
ಸುಮಾರು 15 ದಿನಗಳ ಹಿಂದೆ ರುಕ್ಸಾನಾ ಅವರು ಬೋಲಂಗಿರ್‌ನಲ್ಲು ಶೂಟಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ಜ್ಯೂಸ್ ಕುಡಿದರು. ಜ್ಯೂಸ್ ಕುಡಿದ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾಗಿದ್ದರು, ನಂತರ ಅವರನ್ನು ಭವಾನಿಪಟ್ಟಣದಲ್ಲಿರುವ ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಬಾರ್‌ಗಢ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಆಕೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಕಾರಣ ಭುವನೇಶ್ವರದ ಏಮ್ಸ್‌ಗೆ ಕರೆತರಲಾಯಿತು ಎಂದು ಆಕೆಯ ಸಹೋದರಿ ರೂಬಿ ಬಾನೊ ತಿಳಿಸಿದ್ದಾರೆ.
ಮೃತನ ತಾಯಿ ಕೂಡ ಇದೇ ರೀತಿ ಹೇಳಿಕೆ ನೀಡಿ ವಿಡಿಯೋ ಸಂದೇಶವನ್ನು ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.