ವ್ಯಾಟಿಕನ್ ಸಿಟಿ: ಕ್ರೈಸ್ತ ಧರ್ಮದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ (88) ವ್ಯಾಟಿಕನ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ವೀಡಿಯೋ ಹೇಳಿಕೆಯಲ್ಲಿ ತಿಳಿಸಿದೆ.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೇರಿಕದ ಧರ್ಮಗುರುಗಳಾದ ಪೋಪ್ ಅನಾರೋಗ್ಯದ ಕಾರಣ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಹಾಜರಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೋಪ್ ಕಾಣಿಸಿಕೊಂಡಿದ್ದರು.
ವೈದ್ಯರು ಪೋಪ್ ಫ್ರಾನ್ಸಿಸ್ ಅವರಲ್ಲಿ ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿದ್ದರು.