ವ್ಯಾಟಿಕನ್: ಸೋಮವಾರ ನಿಧನರಾದ ರೋಮನ್ ಕ್ಯಾಥೋಲಿಕ್‌ನ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಅವರ ಅಂತ್ಯಕ್ರಿಯೆ ಸೇಂಟ್ ಪೀಟರ್ಸ್ ಬೆಸಿಲಿಕಾದಿಂದ 4 ಕಿ.ಮೀ. ದೂರದಲ್ಲಿರುವ ರೋಮ್‌ನ ಬೆಸಿಲಿಕಾ ಡಿ ಸಾಂಟಾ ಮಾರಿಯಾ ಮ್ಯಾಗಿಯೋರ್‌ನಲ್ಲಿ (Santa Maria Maggiore Basilica) ವಿಶ್ವ ನಾಯಕರ ಸಮ್ಮುಖದಲ್ಲಿ ನಡೆದಿದೆ.
ಅಂತ್ಯಕ್ರಿಯೆಗೂ ಮುನ್ನ ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್ ಸಿಟಿಯಲ್ಲಿ (Vatican City) ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿ ಸುಮಾರು 160 ದೇಶಗಳ ಗಣ್ಯರು ಅಂತಿಮ ದರ್ಶನ ಪಡೆದರು. ಸುಮಾರು ಎರಡೂವರೆ ಲಕ್ಷ ಜನರು ಅಂತಿಮ ನಮನ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕದ ಧರ್ಮಗುರುಗಳಾದ ಪೋಪ್ ಅನಾರೋಗ್ಯದ ಕಾರಣ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಹಾಜರಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೋಪ್ ಕಾಣಿಸಿಕೊಂಡಿದ್ದರು. ವೈದ್ಯರು ಪೋಪ್ ಫ್ರಾನ್ಸಿಸ್ ಅವರಲ್ಲಿ ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿದ್ದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರನ್ನು ಬಗ್ಗು ಬಡಿಯಬೇಕು: ಶಾಸಕ ನಾರಾಯಣಸ್ವಾಮಿ