ಸ್ಯಾಂಡಲ್‍ವುಡ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’. ಇನ್ನೇನು ಎರಡೇ ದಿನದಲ್ಲಿ ಚಿತ್ರಮಂದಿರದ ಅಂಗಳಕ್ಕೆ ಚಿತ್ರ ಕಾಲಿಡಲಿದೆ. ಸುಕ್ಕಾ ಸೂರಿ, ಸ್ಪೆಷಲ್ ಸ್ಟಾರ್ ಧನಂಜಯ್ ಕಾಂಬಿನೇಷನ್ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಟೀಸರ್, ಟೀಸರ್‌ನಲ್ಲಿ ಡಾಲಿ ಮಾಸ್ ಅವತಾರ ಕಂಡು ಪ್ರೇಕ್ಷಕರು ಫಿಧಾ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಟಗರು ನಂತರ ಒಂದಾಗಿರೋ ರಾ ಡೈರೆಕ್ಟರ್ ಸೂರಿ ಹಾಗೂ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಮಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಮುಂದಾಗಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ.
- Advertisement 2-
ಈಗಾಗಲೇ ‘ಪಾಪ್ ಕಾರ್ನ್ ಮಂಕಿ ಟೈಗರ್’ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಡಾಲಿ ಅಭಿಮಾನಿ ಬಳಗ ‘ಪಾಪ್ ಕಾರ್ನ್ ಮಂಕಿ ಟೈಗರ್’ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಧನಂಜಯ್ ಚಿತ್ರದಲ್ಲಿ ವಿಶೇಷ ಅವತಾರಗಳಲ್ಲಿ ತೆರೆ ಮೇಲೆ ಮಿಂಚಲಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸೂರಿ ಹಾಗೂ ಧನಂಜಯ್ ಸಿನಿಮಾಗಳನ್ನು ಪ್ರೀತಿಸೋ ಭಕ್ತ ವೃಂದಕ್ಕೆ ಈ ಸಿನಿಮಾ ಭರ್ಜರಿ ಭೋಜನ ಆಗಲಿದೆ.
- Advertisement 3-
- Advertisement 4-
ಟೀಸರ್‌ನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕಮಾಲ್ ಮಾಡಿದ್ದು, ಇಲ್ಲೂ ಕೂಡ ಟಗರು ಚಿತ್ರದಂತೆ ಮ್ಯೂಸಿಕ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದ್ದಾರೆ ಚರಣ್ ರಾಜ್. ಶೇಖರ್ ಕ್ಯಾಮೆರಾ ಕಣ್ಣಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸೆರೆಯಾಗಿದ್ದು, ಸುಧೀರ್.ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಯಾವ ರೀತಿ ಸದ್ಧು ಮಾಡುತ್ತೆ ಕಾದು ನೋಡಬೇಕು.