– ಪುರುಷರು ನೋಡುವ ದೃಷ್ಟಿ ಬದಲಾಗಬೇಕು
ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರರವರು ನೆಗೆಟಿವ್ ಆಗಿ ಆ ಹೇಳಿಕೆ ಕೊಟ್ಟಿದ್ದಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಂದ ಆ ಹೇಳಿಕೆ ಕೊಟ್ಟಿದ್ದಾರೆ. ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದು ಎನ್ನುವ ಹೇಳಿಕೆಯನ್ನು ಬೇರೆ ಅರ್ಥದಲ್ಲಿ ಭಾವಿಸಬಾರದು. ಅರಗ ಜ್ಞಾನೇಂದ್ರರವರು ಜಾಗ್ರತೆಯಿಂದ ಇರಬೇಕೆಂಬ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೃಹ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ, ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಅಪರಾಧಿಗಳು ಖಂಡಿತಾ ಸಿಕ್ಕಿಹಾಕಿಕೊಳ್ಳುತ್ತಾರೆ. ದುರ್ದೈವ ಅಂದರೆ, ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಾಚಾರಗಳು ಮರುಕಳಿಸುತ್ತಿದೆ. ಕಠಿಣ ಕಾನೂನುಗಳಾಗಿವೆ, ಇನ್ನೂ ಸ್ವಲ್ಪ ಹೆಚ್ಚಿನ ಕಠಿಣ ಕಾನೂನುಗಳು ಬರಬೇಕಿದೆ ಆಗ ಮಾತ್ರ ಕಾಮುಕರು ಎಚ್ಚೆತ್ತುಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
Advertisement
Advertisement
ಇದೇ ವೇಳೆ, ರಾತ್ರಿ 12 ಆದರೂ ಹೆಣ್ಣು ಮಕ್ಕಳು ಓಡಾಡಬೇಕು. ಹಾಗೆ ಓಡಾಡಿದರೆನೇ ಇಂತಹ ತೊಂದರೆಗೆ ಸಿಲುಕಿಕೊಳ್ಳುವವರಿಗೆ ಧೈರ್ಯ ಬರುತ್ತದೆ. ಹೆಣ್ಣು ಮಕ್ಕಳನ್ನು ಓಡಾಡಬಾರದು ಅಂತ ನಿರ್ಬಂಧಿಸಲು ಆಗಲ್ಲ. ಪುರುಷರು ನೋಡುವ ದೃಷ್ಟಿ ಬದಲಾಗಬೇಕು ಎಂದು ನುಡಿದಿದ್ದಾರೆ. ಇದನ್ನೂ ಓದಿ:ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ – ಅರಗ ಜ್ಞಾನೇಂದ್ರ
Advertisement
ಹಗಲು ಹೊತ್ತಿನಲ್ಲಿ ಜನರು ಓಡಾಡುತ್ತಿರುತ್ತಾರೆ. ಸಾರ್ವಜನಿಕರು, ಅಕ್ಕಪಕ್ಕದ ಜನ ಗಮನಿಸುತ್ತಿರುತ್ತಾರೆ. ರಾತ್ರಿ ಹೊತ್ತಿನಲ್ಲಿ ಇಂಥವು ನಡೆದರೆ ಯಾರಿಗೂ ಕಾಣುವುದಿಲ್ಲ. ರಾತ್ರಿ ಹೊತ್ತು ಸರಿ ಎಂದು ಕಾಮುಕರು ಯೋಚನೆ ಮಾಡುತ್ತಾರೆ. ಸುರಕ್ಷತೆ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಾತ್ರಿ ಹೊತ್ತು ಹೆಣ್ಣುಮಕ್ಕಳು ಓಡಾಡಬಾರದು ಅಂತಲ್ಲ. ಅವರ ಕೆಲಸಗಳಿದ್ದಾಗ ನಿಭಾಯಿಸಬೇಕಾಗುತ್ತದೆ. ಆದರೆ ಜಾಗ್ರತೆ ವಹಿಸಬೇಕಾಗುತ್ತದೆ. ಕೆಲವು ಜಾಗಗಳಲ್ಲಿ ಯಾರು ಇರುತ್ತಾರೆ, ಯಾರು ಇರುವುದಿಲ್ಲ ಎಂದು ನಮಗೆ ಗೊತ್ತಾಗುತ್ತದೆ. ಅಂಥ ಕಡೆಗಳಲ್ಲಿ ಪೊಲೀಸರು ಓಡಾಟ ಮಾಡಬೇಕಾಗುತ್ತದೆ. ಪೊಲೀಸರ ಗಸ್ತು ಇಲ್ಲದಿದ್ದಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ.