ಬಿಜೆಪಿ ಅವಧಿಯಲ್ಲಿ ಕಳಪೆ ಕಾಮಗಾರಿ ಆಗಿದೆ, ಇದ್ರ ತನಿಖೆ ಆಗಬೇಕು: ಶಿವರಾಜ್ ತಂಗಡಗಿ

Public TV
2 Min Read
Shivaraj Tangadagi

ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ಕಳಪೆ ಕಾಮಗಾರಿ ಆಗಿದೆ. ಇದನ್ನು ಪರಿಶೀಲನೆ ಮಾಡಿ ಬಿಬಿಎಂಪಿಯಲ್ಲಿ ಇರೋ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ (DK Shivakumar) ಮೇಲೆ ಗುತ್ತಿಗೆದಾರರ 15% ಆರೋಪ ಮತ್ತು ಬಿಜೆಪಿ ನಾಯಕರ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರ ವಿಚಾರದಲ್ಲಿ ಕಾಮಗಾರಿ ಪರಿಶೀಲನೆಗೆ ಈಗಾಗಲೇ 4 ಸಮಿತಿ ಮಾಡಿದ್ದಾರೆ. ಸಿಎಂ ಮತ್ತು ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಕೆಲಸ ಮಾಡಿದವರಿಗೆ ಬಿಲ್ ಕೊಡ್ತೀವಿ ಅಂತ. ಅಶ್ವಥ್ ನಾರಾಯಣ, ಬೊಮ್ಮಾಯಿ ಅವರಿಗೆ ಯಾಕೆ ಇಷ್ಟು ಅರ್ಜೆಂಟ್? ಕಳಪೆ ಕೆಲಸ ಮಾಡಿ ಬಿಲ್ ಆಗಿದೆಯಾ ಎಂದು ನೋಡಬೇಕು. ಒಂದು ತಿಂಗಳೊಳಗೆ ಕಾಮಗಾರಿ ಪರಿಶೀಲನೆ ಮಾಡಿ ಬಿಲ್ ಬಿಡುಗಡೆ ಮಾಡಲಾಗುತ್ತದೆ. ವರದಿ ಬರುವವರೆಗೂ ತಾಳ್ಮೆ ಇರಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.

shivaraj tangadagi

ಆಣೆ ಪ್ರಮಾಣ ಎಲ್ಲಿ ಮಾಡಬೇಕು, ಯಾವಾಗ ಮಾಡಬೇಕು ಆಗ ಡಿಕೆಶಿ ಮಾಡುತ್ತಾರೆ. ಬಿಜೆಪಿ ಅವರ ಹೇಳಿಕೆ ನೋಡಿದರೆ ಇವರೇನಾದ್ರೂ ಗುತ್ತಿಗೆದಾರರ ಪಾರ್ಟ್ನರ್ಸಾ ಅಂತ ಅನ್ನಿಸುತ್ತದೆ. ಯಾವ ಕಾಮಗಾರಿ ಆಗಿದೆ ಇನ್ಸ್ಪೆಕ್ಷನ್ ಆದ ಬಳಿಕ ಹಣ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಅವರು ಹಿಂದೆ ಕಿಕ್ ಬ್ಯಾಕ್ ಪಡೆದು ನಮ್ಮ ಮೇಲೆ ಆರೋಪ ಮಾಡಿದರು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಬಿಜೆಪಿ ಅವರು ಕಿಕ್ ಬ್ಯಾಕ್ ಪಡೆದಿದ್ದಾರಾ ಎಂದು ಬಿಜೆಪಿ ನಾಯಕರಿಗೆ ತಂಗಡಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್‌ರ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿದ್ದರೆ ಹಣ ಸಿಗಲಿದೆ: ಡಿಕೆ ಸುರೇಶ್ ತಿರುಗೇಟು

ಕೆಂಪಣ್ಣ ಬಿಲ್ ಬಾಕಿಗೆ ಗಡುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಮಂದಿ ಕಾಮಗಾರಿ ಬಗ್ಗೆ ಆರೋಪ ಮಾಡಿದ್ದು ಇವರೇ ಅಲ್ವಾ? ಅದರ ತನಿಖೆ ಆಗಬೇಕಲ್ವಾ? ಕಾಮಗಾರಿ ಆಗಿದೆ ಇಲ್ಲ ಅನ್ನೋದು ಗೊತ್ತಾಗಬೇಕಲ್ವಾ? ಆರೋಪ ಮಾಡೋಕೆ ಬರುತ್ತೆ ಅಂತ ಮಾಡಬೇಡಿ. ಸತ್ಯಾಸತ್ಯತೆ ಬಗ್ಗೆ ತಿಳಿದು ಆರೋಪ ಮಾಡಿ. ಹಿರಿಯ ಅಧಿಕಾರಿಗಳ ಸಮಿತಿ ಆಗಿದೆ. ಯಾರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಅವರಿಗೆ ಹಣ ಸಿಗಲಿದೆ. ಇವರ ಅವಧಿಯಲ್ಲಿ ಕಳಪೆ ಕಾಮಗಾರಿ ಆಗಿದೆ. ಬಿಜೆಪಿ ಮಿತ್ರರ ಪಾಲುದಾರಿಕೆ ಇದೆ. ಸಮಿತಿ ಮಾಡಿದ್ದೇವೆ ವರದಿ ಕೊಡಲಿ ಎಂದರು. 

ನಮ್ಮ ಸರ್ಕಾರ ಗುತ್ತಿಗೆದಾರರನ್ನು ಪ್ರೀತಿಯಿಂದ ನೋಡುತ್ತೆ, ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸುತ್ತೆ. ನಮ್ಮ ಸರ್ಕಾರ ಯಾರನ್ನೂ ಟಾರ್ಗೆಟ್ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವರಿಷ್ಠರು ಅನುಮತಿ ನೀಡಿದರೆ ಪ್ರಭು ಚವ್ಹಾಣ್ ವಿರುದ್ಧ ನೂರು ಕೋಟಿ ಮಾನಹಾನಿ ಕೇಸ್ ದಾಖಲಿಸುವೆ: ಖೂಬಾ ಎಚ್ಚರಿಕೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article