ಬೆಂಗಳೂರು: ಕೊರೊನಾ (Corona) ಮಹಾಮಾರಿಗೆ ರಾಮಬಾಣವಾಗಿದ್ದ ಲಸಿಕೆಯ (Vaccine) ಬಗ್ಗೆ ಅದೇಕೋ ಜನರಿಗೆ ಈಗ ತಾತ್ಸಾರ ಬಂದು ಬಿಟ್ಟಿದೆ. ಮೊದಲೆರಡು ಅಲೆಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದ ಜನರು ಇದೀಗ ಬೂಸ್ಟರ್ ಡೋಸ್ಗೆ (Booster Dose) ನಿರ್ಲಕ್ಷ್ಯ ಮಾಡುತ್ತಿದ್ದಾರೆ.
Advertisement
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ (Azadi Ka Amrit Mahotsav) ಅಂಗವಾಗಿ ಸೆಪ್ಟೆಂಬರ್ 30 ರವರೆಗೆ ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ಸರ್ಕಾರ ನೀಡಿತು. ಆದರೆ, ಜನ ಮಾತ್ರ ನಮಗ್ಯಾಕೆ ಬೂಸ್ಟರ್ ಡೋಸ್ ಅಂತಾ ಕೂತಿದ್ದಾರೆ. ಮಹಾಮಾರಿಗೆ ವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿಯಾಗಲು ಮೂರನೇ ಬೂಸ್ಟರ್ ಡೋಸ್ ಬೇಕು ಅಂತಾ ತಜ್ಞರು ಸಲಹೆ ಕೊಡ್ತಿದ್ರೂ ಈವರೆಗೂ ಕೇವಲ ಶೇ.30ರಷ್ಟು ಮಂದಿ ಮಾತ್ರ ಬೂಸ್ಟರ್ ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಮಯದಲ್ಲಿ ನೀಡಿದ ಉಚಿತ ವ್ಯಾಕ್ಸಿನ್ ಅನ್ನು ಶೇ.10ಕ್ಕಿಂತ ಕಡಿಮೆ ಜನರು ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ
Advertisement
Advertisement
18 ರಿಂದ 59 ವರ್ಷವರೆಗಿನವರಿಗೆ ಜುಲೈ 15ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಇದುವರೆಗೆ 70 ಸಾವಿರ ಜನ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ 75 ದಿನಗಳವರೆಗೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತ ನೀಡಲಾಗಿತ್ತು. ಸಾಕಷ್ಟು ಕಡೆಗಳಲ್ಲಿ ಆರೋಗ್ಯ ಇಲಾಖೆಯವರೇ ಮನೆಗಳಿಗೆ ತೆರಳಿ ಲಸಿಕೆ ನೀಡಿದ್ದಾರೆ. ಆದರೆ, ಜನರು ಇದರಿಂದ ತಪ್ಪಿಸಿಕೊಳ್ಳುತ್ತಿದ್ದು, ಮುಂದೆ ಬರುತ್ತಿಲ್ಲ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದಕ್ಕೆ ಜನರಲ್ಲಿ ಕಾಯಿಲೆ ಬಗ್ಗೆ ಹಿಂದಿದ್ದ ಭಯ ಈಗಿಲ್ಲದಂತಾಗಿದೆ. ಇದನ್ನೂ ಓದಿ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ
Advertisement
ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 18 ವರ್ಷ ಮೇಲ್ಪಟ್ಟರಿಗೆ ಉಚಿತವಾಗಿ ಸೆ.30 ರವರೆಗೆ ಬೂಸ್ಟರ್ ಡೋಸ್ ನೀಡಿತ್ತು. ಜಿಲ್ಲೆಗಳಲ್ಲೂ ಬೇಡಿಕೆಗಿಂತಲೂ ಹೆಚ್ಚು ಲಸಿಕೆಗಳ ದಾಸ್ತಾನು ಇದೆ. ಆದರೆ, ಜನರು ಪಡೆಯುವುದಕ್ಕೆ ಮುಂದೆ ಬರುತ್ತಿಲ್ಲ. ಸಾಮಾಜಿಕ ಮತ್ತು ಕುಟುಂಬದ ಸ್ವಾಸ್ಥ್ಯಕ್ಕಾಗಿ ಬೂಸ್ಟರ್ ಡೋಸ್ ಅತ್ಯಗತ್ಯವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಆದರೆ ಈ ವೇಳೆ ಜನ ಬೂಸ್ಟರ್ ಡೋಸ್ ಪಡೆಯಲು ಹಿಂದೇಟು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಬೂಸ್ಟರ್ ಡೋಸ್ ಪಡೆಯಬೇಕಾದ್ರೆ ಸರ್ಕಾರ ನಿಗದಿ ಮಾಡಿರುವ ಹಣವನ್ನು ಕಟ್ಟಲೇಬೇಕಾಗಿದೆ.
Live Tv
[brid partner=56869869 player=32851 video=960834 autoplay=true]