ಬಳ್ಳಾರಿ: ಸಿದ್ದರಾಮಯ್ಯ ಸರ್ಕಾರದಿಂದ್ಲೂ ಕಳಪೆ ಸೈಕಲ್ ವಿತರಣೆ ಮಾಡಿದ್ದು, ಟೈಯರ್ ಕಿತ್ತು, ಬೆಂಡ್ ಆಗಿ ಮೂರೇ ತಿಂಗಳಲ್ಲಿ ದುರಸ್ತಿಗೆ ಬಂದಿವೆ.
ರಾಜ್ಯದ ವಿವಿಧ ಭಾಗಗಳಿಂದ 90 ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕದ ಏಕೈಕ ಕ್ರೀಡಾ ತರಬೇತಿ ವಸತಿ ನಿಲಯಕ್ಕೆ ಪುಟ್ಬಾಲ್ ಹಾಗೂ ಹಾಕಿ ತರಬೇತಿಗೆ ಆಯ್ಕೆಯಾಗಿ ಬಂದಿದ್ದಾರೆ. ಆದ್ರೆ ಆ ವಿದ್ಯಾರ್ಥಿಗಳಿಗೆ ಕ್ರೀಡಾ ಇಲಾಖೆಯಿಂದ ಸೈಕಲ್ ವಿತರಣೆ ಮಾಡಿದ್ದು, ವಿತರಿಸಿದ ವಾರದಲ್ಲೇ ಸೈಕಲ್ ಗಳೆಲ್ಲವೂ ಮೂಲೆ ಸೇರಿವೆ. ಇದನ್ನೂ ಓದಿ: ನಾಳೆ ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಭಾಗದ ʻಜೆಡಿಎಸ್ ಬೆಳ್ಳಿಹಬ್ಬʼ ಸಮಾವೇಶ
ಸೈಕಲ್‌ಗಳಿಗೆ ಹಾಕಿರೋ ಸ್ಟೀಕರ್ ಹಾಗೇ ಇದ್ರೂ, ಸೈಕಲ್ ಚಕ್ರಗಳೆಲ್ಲಾ ಬೆಂಡಾಗಿವೆ. ಒಂದೆಡೆ ಸೈಕಲ್‌ಗಳು ನಿರುಪಯುಕ್ತವಾಗಿ ಮೂಲೆ ಸೇರಿದ್ರೆ, ಮತ್ತೊಂದೆಡೆ ವಿದ್ಯಾರ್ಥಿಗಳು ನಿತ್ಯ ಮೂರ್ನಾಲ್ಕು ಕಿಲೋಮೀಟರ್ ನಡೆದುಕೊಂಡೇ ಹೋಗೋ ದುಸ್ಥಿತಿಯಿದೆ.
ಹೌದು, ಅಂದು ಶಾಲಾ ಮಕ್ಕಳಿಗೆ ಸೈಕಲ್ ನೀಡಲಾಗ್ತಿತ್ತು. ಈಗ ವಸತಿ ಸಹಿತ ಕ್ರೀಡಾ ತರಬೇತಿಗೆ ಆಯ್ಕೆಯಾದ ಮಕ್ಕಳಿಗೆ ನೀಡಿರುವ ಸೈಕಲ್‌ಗಳೂ ಕಳಪೆಯಾಗಿವೆ. ರಾಜ್ಯದ ವಿವಿದ ಭಾಗಗಳಿಂದ ಬಳ್ಳಾರಿಗೆ ಬಂದಿರೋ 90 ವಿದ್ಯಾರ್ಥಿಗಳಿಗೆ ಕ್ರೀಡಾ ಇಲಾಖೆಯಿಂದ ವಿತರಿಸಿದ ಸೈಕಲ್‌ಗಳು ಕಳಪೆಯಾಗಿವೆ. ಕೇವಲ ಮೂರು ತಿಂಗಳಲ್ಲಿ ದುರಸ್ತಿಗೆ ಬಂದಿರೋ ಸೈಕಲ್‌ಗಳು ಸಂಪೂರ್ಣ ಹಾಳಾಗಿವೆ. ಸೈಕಲ್‌ಗಳ ಹ್ಯಾಂಡಲ್‌ಗಳು ಮುರಿದರೆ, ಇನ್ನೂ ಕೆಲವು ರಿಮ್ ಬೆಂಡಾಗಿ ಕಿತ್ತು ಹೋಗಿವೆ, ಟೈರ್ ಹರಿದಿವೆ. ಈ ಮೂಲಕ ಸೈಕಲ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಕಳಪೆ ಗುಣಮಟ್ಟದ ಸೈಕಲ್ ವಿತರಣೆ ಮಾಡಲಾಗಿದೆ.
ವಿದ್ಯಾರ್ಥಿಗಳು ಕೂಡ ಸೈಕಲ್ ಬಳಕೆ ಮಾಡದೇ ಬಿಸಾಕಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಹಾಗೂ ಸೈಕ್ಲಿಂಗ್‌ಗೂ ಅನುಕೂಲ ಆಗಲಿ ಎಂದು ಪ್ರತೀ ಸೈಕಲ್‌ಗೆ 8-10 ಸಾವಿರ ರೂ. ಖರ್ಚು ಮಾಡಿ ವಿತರಿಸಲಾಗಿತ್ತು. ವಿತರಿಸಿದ ಮೂರೇ ತಿಂಗಳಲ್ಲಿ ಸೈಕಲ್‌ಗಳು ಹಾಳಾಗಿ, ಕ್ರೀಡಾ ಹಾಸ್ಟೆಲ್‌ನಲ್ಲೇ ಮೂಲೆಗುಂಪಾಗಿವೆ. ವಿತರಿಸಿದ ಒಂದೇ ವಾರದಲ್ಲಿ ಸೈಕಲ್‌ಗಳು ಬೆಂಡಾಗಿದ್ರೆ, ಟೈಯರ್‌ಗಳು ಕಿತ್ತು ಬಂದಿವೆ. ಸೈಕಲ್‌ಗಳನ್ನ ರಿಪೇರಿ ಮಾಡಿಸಿ, ಸುಸ್ತಾದ ವಿದ್ಯಾರ್ಥಿಗಳು, ನಿತ್ಯ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ಹಾಗೂ ಪುಟ್ಬಾಲ್, ಹಾಕಿ ಪ್ರಾಕ್ಟೀಸ್ ಹೋಗ್ತಿದ್ದಾರೆ. ಈ ಸ್ಟೋರಿ ಕ್ರೀಡಾ ಇಲಾಖೆಯ ಕರ್ಮಕಾಂಡವನ್ನ ಬಯಲು ಮಾಡುವಂತಿದೆ.ಇದನ್ನೂ ಓದಿ: Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!

