ಬೆಂಗಳೂರು: ನೀವು ಬಡವರೆಲ್ಲ ಕಾಂಗ್ರೆಸ್‍ಗೆ ವೋಟ್ ಹಾಕ್ತೀರಾ ನಾವು ನಿಮಗೆ ಯಾಕೆ ಅಭಿವೃದ್ಧಿ ಮಾಡಬೇಕು. ನಮ್ಮ ವಾರ್ಡ್ ನಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲೇ ಬಡವರೇ ಮೋಸಗಾರರು. ನಿಯತ್ತೇ ಇಲ್ದೆ ಇರೋರೆಲ್ಲ ಬಡತನದಲ್ಲೇ ಉಳಿದಿದ್ದಾರಾ ಎಂದು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಎಂಎಲ್‍ಎ ಮುನಿರಾಜ್ ಶಿಷ್ಯ ಮಲ್ಲಸಂದ್ರ ಕಾರ್ಪೊರೇಟರ್ ಲೊಕೇಶ್ ಹೇಳಿದ್ದಾರೆ.
ಶ್ರೀಮಂತರಿರುವ ಬೂತ್ ಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಅಂತ ಲೊಕೇಶ್ ಲೆಕ್ಕ ಕೊಟ್ಟಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಕಲ್ಯಾಣ ನಗರ, ಪ್ರಶಾಂತ್ ನಗರ, ಬಿಎಚ್‍ಎಂ ಲೇಔಟ್‍ಗಳಲ್ಲಿ ಆಫೀಷಿಯಲ್‍ಗಳು ಇದ್ದಾರೆ ಯಾರಿಗೂ ದುಡ್ಡು ಕೊಟ್ಟಿಲ್ಲ ಆದ್ರೂ ಆ ಎಲ್ಲ ಬೂತ್‍ಗಳಲ್ಲಿ ಬಿಜೆಪಿ ಲೀಡ್ ಬಂದಿದೆ.
ಫ್ರೀ ಮನೆ ಕೊಟ್ರು ಕಾಂಗ್ರೆಸ್‍ಗೆ ವೋಟ್ ಹಾಕೋ ನಿಮ್ಗೆ ನಾವ್ಯಾಕೆ ಅಭಿವೃದ್ಧಿ ಮಾಡ್ಬೇಕು ಅನ್ನೋದಾಗಿ ಮತ ನೀಡಿದ ಜನರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಆ ಆಡಿಯೋ ಪಬ್ಲಿಕ್‍ಟಿವಿಗೆ ಲಭ್ಯವಾಗಿದೆ. ಸ್ಥಳೀಯರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದು ದೂರು ಸಹ ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಡಿಯೋ ಕ್ಲಿಪ್:
ಲೋಕೇಶ್ – ನಿಮಗೆಲ್ಲ ಮನೆ ಕೊಟ್ಟಿಲ್ಲ ಅಂತಾ ಬೈಯ್ಕೋಬೇಡ ನೀವೆಲ್ಲ ಬಡವರು, ಮನೆಕೊಟ್ರೆ ಯಾರು ವೋಟ್ ಹಾಕಲ್ಲ, ನೀವೇ ಅಲ್ಲ ಯಾರು ವೋಟ್ ಹಾಕಲ್ಲ, ಮೇಲಗಡೆ ಇದ್ದಾರಲ್ಲ ಸ್ಲಂ ಅವರು ಎಲ್ಲಾ ಕಾಂಗ್ರೆಸ್‍ಗೆ ವೋಟ್ ಹಾಕ್ತಾರೆ.. ಬಡವರಿಗೆ ಹೆಲ್ಪ್ ಮಾಡಿದ್ರೆ ಯಾವುದು ಶಾಶ್ವತ ಅಲ್ಲ, ಇವತ್ತಿನ ಪರಿಸ್ಥಿತಿ ಅಲ್ಲಿ, ಮನೆ ಕೊಟ್ರಲ್ಲ ಎಂಎಲ್‍ಎ, ಎಂಎಲ್‍ಎ ಗೊತ್ತಿಟ್ಟುಕೊಂಡು ಅವರಿಗೆ ವೋಟ್ ಹಾಕ್ತಾರೆ
ಸಾರ್ವಜನಿಕ – ವಿಜಯಲಕ್ಷ್ಮೀ ಲೇಔಟ್‍ನಲ್ಲಿ ಅಂತಾ ಕೆಲಸ ಆಗಿಲ್ಲ
ಲೋಕೇಶ್ – ವಿಜಯಲಕ್ಷ್ಮೀ ಲೇಔಟ್ ನಿನಗೆ ಬರಲ್ಲ ಬಿಡು, ವಿಜಯಲಕ್ಷ್ಮೀ ಲೇಔಟ್ ಬರಲ್ಲ, ಅಕಡೆ ಬರೋದು, ಏಕಾ ಫ್ರೀ ಮನೆಗಳು ಯಾವುದು ವೋಟ್ ಬರಲ್ಲ,
ಸಾರ್ವಜನಿಕ – ಬಡವರು, ಬಗ್ಗರು ವೋಟ್ ಹಾಕ್ತಾರೆ..
ಲೋಕೇಶ್ – ಧರ್ಮಸ್ಥಳ ಮಂಜುನಾಥಸ್ವಾಮಿ ಆಣೆಗೂ ಬಡವ ವೋಟ್ ಹಾಕಲ್ಲ ತಿರುಪತಿ ವೆಂಕಟರಮಣಸ್ವಾಮಿ ಆಣೆಗೂ ಬಡವರಿಂದ ಯಾವುದೇ ವೋಟ್ ಬರಲ್ಲ, ಬಡವನೇ ದೊಡ್ಡ ಮೋಸ ಆಫ್ ಗಾಡ್… ಬಡವನೇ ಮೋಸ.. ಬಡವರು ಕಾಂಗ್ರೆಸ್ ಲೀಡ್, ಕಲ್ಯಾಣನಗರ ಅಫೀಷಿಯಲ್ ಬಿಜೆಪಿ ಲೀಡ್, ನಮ್ ಮನೆ ಮುಂದೇಗಡೆ ಅಫಿಷಿಯಲ್ ಬಿಜೆಪಿ ಲೀಡ್.. ಎಲ್ಲೆಲ್ಲಿ ಬಡವರು ಇದ್ದಾರೋ ಅಲ್ಲೆಲ್ಲ ಕಾಂಗ್ರೆಸ್‍ಗೆ ಕೊಡ್ತಾರೆ.