ಕೋಲಾರ: ಯರಗೋಳ ಡ್ಯಾಂ (Yargol Dam) ಯೋಜನೆಯಲ್ಲಿ ಕೋಟ್ಯಂತರ ರೂ. ಅಕ್ರಮವಾಗಿದ್ದು ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತನಿಖೆಗೆ ಆದೇಶಿಸಿದ್ದಾರೆ.
Advertisement
ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಈ ಆರೋಪ ಮಾಡಿದ್ದು, ಸೂಕ್ತ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ ಈ ಡ್ಯಾಂ ನಿರ್ಮಾಣವಾಗಿದೆ. ಪೈಪ್ ಲೈನ್ ಸೇರಿದಂತೆ ನೀರು ಸರಬರಾಜು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಈ ಕಾಮಗಾರಿ ನಡೆಸಿತ್ತು. ಇದನ್ನೂ ಓದಿ: Mango Season: ಊಟದ ಬಳಿಕ ಮಾವು ತಿಂದು ಯುವತಿ ದುರ್ಮರಣ!
Advertisement
Advertisement
ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇನ್ನೂ ನೀರು ಪೂರೈಕೆಗೆ 79 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಒಟ್ಟು 249 ಕೋಟಿ ರೂ. ಯೋಜನೆಗೆ ಹಣ ಮಂಜೂರು ಪ್ರಕ್ರಿಯೆ ನಡೆದಿದೆ. ಆದರೆ ಡ್ಯಾಂ ನಿರ್ಮಾಣ, ಪೈಪ್ ಲೈನ್ ಅಳವಡಿಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ನಿಗದಿಗಿಂತಲೂ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿರುವ ಆರೋಪವನ್ನ ಮಾಡಲಾಗಿದೆ.
Advertisement
ಇತ್ತೀಚೆಗೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದರು. 15 ದಿನಗಳಲ್ಲಿ ತನಿಖೆ ನಡೆಸಿ, ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪುನಿತ್ ಕೆರೆಹಳ್ಳಿಗೆ ನೋಟಿಸ್ – ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ
Web Stories